ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ನಿನ್ನೆ ದಿನಾಂಕ 17/05/2021 ರಂದು ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ಪ್ರಕಾರ 987 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, 15 ಜನ ಕೊರೋನಾಗೆ ಬಲಿಯಾಗಿದ್ದಾರೆ.

ಜಿಲ್ಲಾಡಳಿತದ ವರದಿ ಪ್ರಕಾರ ಕಾರವಾರದಲ್ಲಿ 80, ಅಂಕೋಲಾದಲ್ಲಿ 27, ಕುಮಟಾದಲ್ಲಿ 145, ಹೊನ್ನಾವರ 102, ಭಟ್ಕಳದಲ್ಲಿ 18, ಶಿರಸಿಯಲ್ಲಿ 66, ಸಿದ್ದಾಪುರದಲ್ಲಿ 272 , ಯಲ್ಲಾಪುರದಲ್ಲಿ 79, ಮುಂಡಗೋಡ 97, ಹಳಿಯಾಳದಲ್ಲಿ 83, ಮತ್ತು ಜೋಯಿಡಾದಲ್ಲಿ 18 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

RELATED ARTICLES  ಕುಮಟಾ ಬ್ಲಾಕ್ ಕಾಂಗ್ರೆಸ್ ನ ನೂತನ ಕಾರ್ಯಾಲಯ ಉದ್ಘಾಟನೆ

ಶಿರಸಿ 2, ಸಿದ್ದಾಪುರ 2, ಮುಂಡಗೋಡ 4, ಹಳಿಯಾಳ 5, ಜೋಯ್ಡಾ 2 ಸಾವಾಗಿದ್ದು ಒಟ್ಟು 15 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಒಟ್ಟು 409 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 7202 ಆಗಿದ್ದು, ಅವರಲ್ಲಿ 427 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 6775 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ಕಾರವಾರ 162, ಅಂಕೋಲಾ‌ 73, ಕುಮಟಾ 56, ಹೊನ್ನಾವರ 101, ಭಟ್ಕಳ 65, ಶಿರಸಿ 0, ಸಿದ್ದಾಪುರ 102, ಯಲ್ಲಾಪುರ 65, ಮುಂಡಗೋಡ 80, ಹಳಿಯಾಳ 300, ಜೋಯ್ಡಾ 100 ಜನ ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 1104 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  ಅಘನಾಶಿನಿ ಯಿಂದ ತದಡಿಗೆ ನಾಲ್ಕುಚಕ್ರದ ವಾಹನಗಳ ಸಾಗಾಣಿಕೆಗೆ ಬಾರ್ಜ ಇದೆಯೆಂಬ ತಪ್ಪು ಮಾಹಿತಿಯಿಂದ ಬಂದು ದಾರಿಕಾಣದೇ ಪರದಾಡುತ್ತಿರುವ ಪ್ರವಾಸಿಗರು..

ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ ಇದುವೇ ಜನತೆಗೆ ನಮ್ಮ ಕಳಕಳಿಯ ಮನವಿ.