ಹೊನ್ನಾವರ : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿಯವರ ತಂದೆ ನಾರಾಯಣ ತೆಂಗೇರಿ (86) ಇಂದು ನಸುಕಿನ ವೇಳೆ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟರು. 1961 ರಲ್ಲಿ ಲೋಕೋಪಯೋಗಿ ಇಲಾಖೆ, ಹಳಿಯಾಳ ವಿಭಾಗದಲ್ಲಿ ತಮ್ಮ ಸೇವೆಯನ್ನು ಆರಂಭಿಸಿ ಶಿರಸಿ, ಸಿದ್ಧಾಪುರ, ಕುಮಟಾ, ಭಟ್ಕಳದಲ್ಲಿ ಕಾರ್ಯನಿರ್ವಹಿಸಿ ಕೊನೆಗೆ ಹೊನ್ನಾವರದಲ್ಲಿ ನಿವೃತ್ತಿಯಾಗಿದ್ದರು.

RELATED ARTICLES  ಹೊನ್ನಾವರದಲ್ಲಿ ಹೆದ್ದಾರಿಗೆ‌ ಉರುಳಿದ ಆಲದ ಮರ : ಸಂಚಾರ ಅಸ್ತವ್ಯಸ್ತ.

ಸುಮಾರು 35 ವರ್ಷಗಳ ಕಾಲದ ತಮ್ಮ ಸೇವಾವಧಿಯಲ್ಲಿ ಎಲ್ಲಿಯೂ ಸಣ್ಣ ಕಪ್ಪು ಚುಕ್ಕೆ ಇಟ್ಟುಕೊಳ್ಳದೇ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದರು. ಒಂದು ಹೆಣ್ಣು, ಎರಡು ಗಂಡು ಮಕ್ಕಳ ತಂದೆಯಾಗಿರುವ ನಾರಾಯಣ ತೆಂಗೇರಿ ಕಳೆದ ಐದು ವರ್ಷದ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದರು. ನಾರಾಯಣ ತೆಂಗೇರಿಯವರ ನಿಧನದ ಕುರಿತಂತೆ ಅವರ ಆಪ್ತರು ಕಂಬನಿ ಮಿಡಿದಿದ್ದಾರೆ.

RELATED ARTICLES  ಉಮೇಶ ಮುಂಡಳ್ಳಿಯವರಿಗೆ ಭಟ್ಕಳ ದಲ್ಲಿ ನಾಗರಿಕ ವೇದಿಕೆ ಸನ್ಮಾನ