ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ಪ್ರಕಾರ 631 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, 11 ಜನ ಕೊರೋನಾಗೆ ಬಲಿಯಾಗಿದ್ದಾರೆ.

ಜಿಲ್ಲಾಡಳಿತದ ವರದಿ ಪ್ರಕಾರ ಕಾರವಾರದಲ್ಲಿ 46, ಅಂಕೋಲಾದಲ್ಲಿ 102, ಕುಮಟಾದಲ್ಲಿ 42, ಹೊನ್ನಾವರ 69, ಭಟ್ಕಳದಲ್ಲಿ 88, ಶಿರಸಿಯಲ್ಲಿ 37, ಸಿದ್ದಾಪುರದಲ್ಲಿ 159 , ಯಲ್ಲಾಪುರದಲ್ಲಿ 15, ಮುಂಡಗೋಡ 16, ಹಳಿಯಾಳದಲ್ಲಿ 31, ಮತ್ತು ಜೋಯಿಡಾದಲ್ಲಿ 26 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

RELATED ARTICLES  ಖಾಸಗಿ ಬಸ್ ಬಡಿದು ಪಾದಾಚಾರಿ ಸಾವು: ಕುಮಟಾದ ಅಳ್ವೆಕೋಡಿಯಲ್ಲಿ ಘಟನೆ.

ಕಾರವಾರ 2, ಅಂಕೋಲಾ 1, ಹೊನ್ನಾವರ 1, ಭಟ್ಕಳ 3, ಶಿರಸಿ 1 ಸಾವಾಗಿದ್ದು ಒಟ್ಟು 11 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಒಟ್ಟು 447
ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 6554 ಆಗಿದ್ದು, ಅವರಲ್ಲಿ 434 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 6120 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ಕಾರವಾರ 87, ಅಂಕೋಲಾ‌ 103, ಕುಮಟಾ 52, ಹೊನ್ನಾವರ 28, ಭಟ್ಕಳ 23, ಶಿರಸಿ 495, ಸಿದ್ದಾಪುರ 0, ಯಲ್ಲಾಪುರ 239, ಮುಂಡಗೋಡ 98, ಹಳಿಯಾಳ 209, ಜೋಯ್ಡಾ 1 ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 1335 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  ಆಯುರ್ವೇದ ಆಸ್ಪತ್ರೆಯಲ್ಲಿ ಅಲೋಪತಿ ಚಿಕಿತ್ಸೆ: ಅಧಿಕಾರಿಗಳಿಂದ ಕ್ರಮ

ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ ಇದುವೇ ಜನತೆಗೆ ನಮ್ಮ ಕಳಕಳಿಯ ಮನವಿ.