ಯಲ್ಲಾಪುರ : ಉತ್ತರಕನ್ನಡ ಸಂಸದ ಅನಂತಕುಮಾರ್ ಹೆಗಡೆಯವರಿಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವ ಸ್ಥಾನ ದೊರೆತಿರುವುದಕ್ಕೆ ಬಿಜೆಪಿ ಕಾರ್ಯಕರ್ತರು ಯಲ್ಲಾಪುರದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ತಾಲ್ಲೂಕಾ ಅಧ್ಯಕ್ಷ ರಾಮು ನಾಯ್ಕ, ಐದು ಬಾರಿ ಸಂಸದರರಾಗಿ ಆಯ್ಕೆಯಾದ ಅನಂತಕುಮಾರ ಹೆಗಡೆಯವರಿಗೆ ಸಚಿವ ಸ್ಥಾನ ದೊರೆತಿರುವುದು ಜಿಲ್ಲೆಯ ಹೆಮ್ಮೆಯಾಗಿದೆ. ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಅವರಿಗಿದೆ ಎಂದರು.

RELATED ARTICLES  ಎಲ್ಲ ಧರ್ಮಗಳು ಕೂಡ “ಸರ್ವೇ ಜನಾಃ ಸುಖಿನೋ ಭವಂತು” ಎಂಬ ಸಂದೇಶವನ್ನೇ ಸಾರುತ್ತವೆ; ಸಚಿವ ಆರ್ ವಿ ದೇಶಪಾಂಡೆ

ಬಿಜೆಪಿ ಜಿಲ್ಲಾ ವಕ್ತಾರ ಪ್ರಮೋದ ಹೆಗಡೆ ಮಾತನಾಡಿ, ಕರ್ನಾಟಕದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರ ಹತ್ಯೆಯಾಗುತ್ತಿದೆ, ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಅನಂತಕುಮಾರ ಹೆಗಡೆ ಈ ಕುರಿತು ಕೇಂದ್ರದ ಗಮನ ಸೆಳೆಯಲಿದ್ದಾರೆ. ಯೋಗ್ಯ ವ್ಯಕ್ತಿಗೆ ಯೋಗ್ಯ ಹುದ್ದೆ ಸಿಕ್ಕಿದೆ ಎಂದರು.

ರಾಜ್ಯ ಯವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ನರಸಿಂಹ ಕೋಣೆಮನೆ ಅಭಿಪ್ರಾಯಪಟ್ಟು, ಉತ್ತರ ಕನ್ನಡದ ಜನತೆ ಬಹು ದಿನದ ನಿರೀಕ್ಷೆ ಇಂದು ನಿಜವಾಗಿದೆ ಎಂದರು.

RELATED ARTICLES  ಹಿರೇಗುತ್ತಿ ಹೈಸ್ಕೂಲ್‍ನಲ್ಲಿ ಯಶಸ್ವಿಗೊಂಡ ಕುಮಟಾ ತಾಲೂಕ ಹಿಂದಿ ಕಾರ್ಯಗಾರ

ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ಪ.ಪಂ ಸದಸ್ಯ ಯೋಗೇಶ ಹಿರೇಮಠ ಬಿಜೆಪಿ ಪ್ರಮುಖೆ ಶಾಮಲಿ ಪಾಟಣಕರ ಮಾತನಾಡಿದರು.

ಪ.ಪಂ ಸದಸ್ಯ ವಿನೋದ ತಳೇಕರ, ಬಿಜೆಪಿ ಪ್ರಮುಖರಾದ ಸೋಮೇಶ್ವರ ನಾಯ್ಕ, ಸುರೇಶ ಶಾನಭಾಗ, ಪ್ರಹ್ಲಾದ ನಾಯಕ, ರಾಜೇಶ ಭಟ್, ಎಮ್.ಎನ್.ಭಟ್, ರಾಮಚಂದ್ರ ಚಿಕ್ಯಾನಮನೆ, ಕೆ.ಟಿ.ಭಟ್, ಪ್ರಕಾಶ ಕಟ್ಟಿಮನಿ, ಧೀರಜ ತಿನ್ನೇಕರ, ಮಹೇಶ ನಾಯ್ಕ, ನಾಗರಾಜ ಕವಡಿಕೆರೆ, ವಿಶ್ವನಾಥ್ ಪಾಟಣಕರ, ಪ್ರಶಾಂತ ಹೆಗಡೆ ಮುಂತಾದವರಿದ್ದರು.