ಕುಮಟಾ: ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಸೆಂಟರ್‌ಗೆ ಬಿ. ರ್. ಶೆಟ್ಟಿ ಫೌಂಡೇಶನ್ ಮೇ ೧೫ ರಿಂದ ತನ್ನ ಸೇವೆಯಿಂದ ಹಿಂದಕ್ಕೆ ಸರಿದಿರುವುದರಿಂದ, ಡಯಾಲಿಸಿಸ್ ಸೇವೆ ಪಡೆಯುತ್ತಿದ್ದ ನೂರಾರು ಬಡವರ ಜೀವ ತೂಗುಯ್ಯಾಲೆಯಲ್ಲಿ ಸಿಲುಕಿದ್ದನ್ನು ಮನಗಂಡ ರೋಟರಿ ಕ್ಲಬ್ ಕುಮಟಾ ಘಟಕವು, ತನ್ನ ಸದಸ್ಯರ ಹಾಗೂ ಸ್ನೇಹಿತರ ಸಹಯೋಗದಲ್ಲಿ ೧.೫೦ ಲಕ್ಷ ರು.ಗಳ ಡಯಾಲಿಸಿಸ್ ಪರಿಕರಗಳನ್ನು ಸಂಗ್ರಹಿಸಿ, ವೈದ್ಯಾಧಿಕಾರಿ ಡಾ.ಗಣೇಶ್ ನಾಯ್ಕರ ಮೂಲಕ ಹಸ್ತಾಂತರಿಸಿದ್ದಾರೆ.
ಪರಿಕರಗಳನ್ನು ಸ್ವೀಕರಿಸಿದ ಅವರು ರೋಟರಿಯ ಆಪತ್ಕಾಲದ ಸೇವೆಯನ್ನು ಪ್ರಶಂಸಿಸಿದ್ದಾರೆ. ಈ ಸಂದರ್ಭದಲ್ಲಿ ಡಾ.ಹೇಮಂತ ನಾಯ್ಕ, ರೋ.ಸತೀಶ್ ನಾಯ್ಕ, ರೋ.ಅರುಣ ಉಭಯಕರ, ರೋ.ಸುರೇಶ ಭಟ್ಟ ಹಾಗೂ ಚಂದಾವರ ಗ್ರಾಮ ಪಂಚಾಯತ ಅಧ್ಯಕ್ಷೆ ಛಾಯಾ ಉಭಯಕರ ಉಪಸ್ಥಿತರಿದ್ದರು.