ಹೊನ್ನಾವರ : ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ರೋಗಿಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ದೇಶಪಾಂಡೆ ಮೆಮೊರಿಯಲ್ ಟ್ರಸ್ಟ ಆಸ್ಪತ್ರೆಗಳಿಗೆ ವೈಧ್ಯಕೀಯ ಸಲಕರಣೆಗಳನ್ನು ವಿತರಿಸಲು ಮುಂದಾಗಿದೆ. ಇಂದು ಹೊನ್ನಾವರ ಸರಕಾರಿ ಆಸ್ಪತ್ರೆಗೆ ದೇಶಪಾಂಡೆ ಮೆಮೊರಿಯಲ್ ಟ್ರಸ್ಟ ರವಾನಿಸಿದ ೧೫೦ ಪಿ.ಪಿ.ಕಿಟ್‌ನ್ನು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಇಂಟೆಕ ಅಧ್ಯಕ್ಷ ಆಗ್ನೇಲ್ ಡಾಯಸ್. ಮತ್ತು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಕ್ರಿಯಾ ಶೇಖ್, ಹನೀಫ್ ಶೇಖ್, ಚಂದ್ರಶೇಖರ ಚಾರೋಡಿ, ಮೋಹನ ಮೇಸ್ತ, ಜೋನ್ ಪೆರಿರಾ, ಮುಂತಾದವರು ಸೇರಿ ತಾಲೂಕಾ ಆಸ್ಪತ್ರೆ ವೈದ್ಯಾಧಿಕಾರಿ ರಾಜೇಶ ಕಿಣಿಯವರಿಗೆ ಹಸ್ತಾಂತರಿಸಿದರು.

RELATED ARTICLES  ಕೊಡುಕೊಳ್ಳುವ ವಿಷಯದಲ್ಲಿ ಆತ್ಮೀಯತೆ ಹಾಗೂ ಪರಿಶುದ್ಧತೆ ಇರಬೇಕು: ಸ್ವರ್ಣವಲ್ಲೀ ಶ್ರೀ

ಹೊನ್ನಾವರ ತಾಲೂಕಿನ ಕೋವಿಡ್ ರೋಗಿಗಳ ಅನುಕೂಲತೆಯ ದೃಷ್ಠಿಯಿಂದ ಆಸ್ಪತ್ರೆಗಳಿಗೆ ಅತ್ಯಾವಶ್ಯಕವಾಗಿರುವ ಪಿ.ಪಿ.ಕಿಟ್ ವಿತರಿಸಿದ ಮಾಜೀ ಸಚಿವ ಆರ್. ವಿ. ದೇಶಪಾಂಡೆ ಮತ್ತು ದೇಶಪಾಂಡೆ ಮೆಮೊರಿಯಲ್ ಟ್ರಸ್ಟಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಧನ್ಯವಾದ ಸಲ್ಲಿಸಿದ್ದಾರೆ.

RELATED ARTICLES  ಜಿಂಕೆ ಕೋಡು, ಕಾಡು ಬೆಕ್ಕಿನ ದವಡೆ ಹಲ್ಲನ್ನು ಸಂಗ್ರಹಿಸಿದ ವ್ಯಕ್ತಿ ಅರೆಸ್ಟ್..!