ಶಿರಸಿ: ಇಲ್ಲಿನ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ವಾಡ್ರ್ನಲ್ಲಿ ದಾಖಲಾದ ರೋಗಿಗಳಿಗೆ ಆಕ್ಸಿಜನ್ ಪೂರೈಸುವ ಘಟಕದಲ್ಲಿ ಶನಿವಾರ ನಸುಕಿನ ಜಾವ ಸೋರಿಕೆ ಕಂಡು ಬಂದಿದೆ.

ಆಸ್ಪತ್ರೆ ಪಕ್ಕದಲ್ಲಿ ಆಕ್ಸಿಜನ್ ಸಂಗ್ರಹಾಗಾರವಿದ್ದು ಇಲ್ಲಿಂದ ಪೈಪ್ ಲೈನ್ ಮೂಲಕ ವಾರ್ಡ್ ಗೆ ಆಕ್ಸಿಜನ್ ಪೂರೈಕೆ ಆಗುತ್ತಿದೆ. ನಸುಕಿನ ಜಾವದಿಂದ ನಿರೀಕ್ಷಿತ ಪ್ರಮಾಣದಲ್ಲಿ ರೋಗಿಗಳಿಗೆ ಆಕ್ಸಿಜನ್ ಪೂರೈಕೆ ಆಗದಿದ್ದಾಗ ಗಮನಕ್ಕೆ ಬಂದಿದೆ. ಕೋವಿಡ್ ವಾಡ್ರ್ನಲ್ಲಿ 20 ರೋಗಿಗಳಿದ್ದಾರೆ.

ಅವರಲ್ಲಿ 6 ಮಂದಿಯಷ್ಟೇ ಗಂಭೀರ ಸ್ಥಿತಿಯಲ್ಲಿದ್ದು ಅವರಿಗೆ ಹೆಚ್ಚಿನ ಪ್ರಮಾಣದ ಆಕ್ಸಿಜನ್ ಅಗತ್ಯವಿದೆ. ಆಕ್ಸಿಜನ್ ಪೂರೈಕೆಗೆ ಸದ್ಯಕ್ಕೆ ಸಮಸ್ಯೆ ಇಲ್ಲ ಎಂದು ತಿಳಿಸಲಾಗಿತ್ತು. ಆದರೆ, ಸೋರಿಕೆ ತಡೆಗಟ್ಟುವುದು ವಿಳಂಬವಾದರೆ ರೋಗಿಗಳನ್ನು ಸಿದ್ದಾಪುರ, ಯಲ್ಲಾಪುರ ಆಸ್ಪತ್ರೆಗೆ ಸ್ಥಳಾಂತರಿಸಬೇಕಾಗಬಹುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದವು.

RELATED ARTICLES  ಕುದುರೆ ಸವಾರಿ ಆತ್ಮವಿಶ್ವಾಸಕ್ಕೆ ಸಹಕಾರಿ: ರಾಘವೇಶ್ವರ ಶ್ರೀ

ಸ್ಥಳಕ್ಕೆ ತಂತ್ರಜ್ಞರನ್ನು ಕರೆಯಿಸಲಾಗಿದ್ದು ದುರಸ್ಥಿ ಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ಡಿವೈಎಸ್ಪಿ ರವಿ ನಾಯ್ಕ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಎಸ್‍ಐ ರಾಜಕುಮಾರ್ ಭೇಟಿ ನೀಡಿದ್ದಾರೆ.

ಜೀವ ಕಾಪಾಡಿದ ಆರೋಗ್ಯ ಸಿಬ್ಬಂದಿಗಳು

RELATED ARTICLES  ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ

ಘಟನೆ ಗಮನಕ್ಕೆ ಬರುತ್ತಿದ್ದಂತೆ ತಕ್ಷಣ ಕಾರ್ಯ ಪ್ರವೃತ್ತರಾದ ಆರೋಗ್ಯ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳು ಕೊರೋನಾ ಸೊಂಕಿತರ ಜೀವ ಉಳಿಸುವಲ್ಲಿ ಸಫಲರಾಗಿದ್ದಾರೆ‌. ಸೋರಿಕೆ ಕಂಡುಬಂದ ತಕ್ಷಣ 12 ರೋಗಿಗಳನ್ನು ಪಕ್ಕದ ತಾಲೂಕಿಗೆ ರವಾನಿಸಿದ್ದಾರೆ‌. ಉಳಿದ 14 ಜನರಿಗೆ ತಕ್ಷಣ ಆಕ್ಸಿಜನ್ ಲಭಿಸುವಂತೆ ವ್ಯವಸ್ಥೆ ಮಾಡಿದ್ದಾರೆ. ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಮಯ ಪ್ರಜ್ಞೆ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.