ಮೈಸುರು:2017 ರ ದಸರಾ ಹಬ್ಬ ಇದೀಗ ಮತ್ತೊಂದು ವೈಶಿಷ್ಟವನ್ನು ಪಡೆದುಕೊಂಡಿದೆ. ಬರಲಿರುವ ದಸರಾ ಉತ್ಸವ ವಿದೇಶಿ ಪ್ರವಾಸಿಗರಿಗೆ ಸಿಹಿ ಸುದ್ದಿಯನ್ನು ಒದಗಿಸಿದೆ. ಅದೇನೆಂದರೆ ಹಿಂದೆ ದಸರಾ ನೋಡಲು ಬರುವವರು ಹೆಚ್ಚು ಸಮಯ ಪ್ರವೇಶಾತಿ ಟಿಕೆಟ್ ಅನ್ನು ಪಡೆಯಲು ವ್ಯರ್ಥ ಮಾಡಬೇಕಾಗುತ್ತಿತ್ತು .ಅಲ್ಲದೇ ಸ್ಥಳಗಳನ್ನು ನೋಡಲು ಗಂಟೆಗಟ್ಟಲೇ ಕಾದುಕುಳಿತುಕೊಳ್ಳ ಬೇಕಾಗುತ್ತಿತ್ತು.
ವರ್ಷದಿಂದ ವರ್ಷ ಕ್ಕೆ ಹೆಚ್ಚುತ್ತಿರುವ ದಸರಾ ನೋಡುಗರನ್ನು ನಿಯಂತ್ರಿಸಲು ಇದೀಗ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಮೈಸೂರಿನ ಪ್ರವಾಸಿ ತಾಣಗಳನ್ನು ನೋಡಲು ಏಕ ಟಿಕೆಟ್ ವ್ಯವಸ್ಥೆ ನ್ನು ಜಿಲ್ಲಾಡಳಿತ ಮಾಡಿದೆ. ಈ ಹಿಂದೆ ಇದ್ದಂತಹ ತೊಂದರೆಗಳನ್ನು ಇಂದಿನ ದಸರಾದಲ್ಲಿ ನಿವಾರಿಸಲಾಗಿದೆ. ಚಾಮುಂಡಿ ಬೆಟ್ಟ, ಮೃಗಾಲಯ, ಅರಮನೆ, ಕೆ.ಆರ್.ಎಸ್ ಹೀಗೆ ಹಲವು ಮೈ-ಮನ ಸೆಳೆಯುವ ತಾಣಗಳನ್ನು ನೋಡಲು ಪ್ರವಾಸಿಗರಿಗೆ ಸುಲಭವಾದ ಮಾರ್ಗ ಏಕ ಟಿಕೆಟ್ ವ್ಯವಸ್ಥೆ. ಇದರಿಂದ ನೋಡುಗರು ಎಲ್ಲಿಯು ಕಿರಿಕಿರಿಯಾಗದೇ ಒಂದೇ ಟಿಕೆಟ್ ಅನ್ನು ಖರೀದಿಸಿ ಮೈಸೂರಿನ ಯಾವುದೇ ಸ್ಥಳಗಳಿಗೆ ಭೇಟಿ ನೀಡಬಹುದು . ಅಲ್ಲದೇ ಮತ್ತೊಂದು ವಿಶೇಷತೆ ಎಂದರೆ ಟಿಕೆಟ್ ಅನ್ನು ಆನ್ಲೈನ್ ನಲ್ಲಿಯೂ ಬುಕ್ ಮಾಡಬಹುದು. ದಸರಾ ಮುಗಿದ ಬಳಿಕವೂ ಮೂರು ತಿಂಗಳ ಕಾಲ ಈ ವ್ಯವಸ್ಥೆ ಜಾರಿಯಲಿದ್ದು, ಈ ಪ್ರಯತ್ನ ಯಶ ಕಂಡಲ್ಲಿ ಈ ವ್ಯವಸ್ಥೆಯನ್ನು ಪ್ರತೀ ಬಾರಿಯೂ ಮುಂದುವರೆಸುವುದಾಗಿ ಜಿಲ್ಲಾಡಳಿತ ಹೇಳಿದೆ.
ಮೈಸೂರಿನ ಜಿಲ್ಲಾಡಳಿತ ಮತ್ತು ಪ್ರವಾಸ ಇಲಾಖೆ ಜಂಟಿಯಾಗಿ ಕಾರ್ಯರೂಪಕ್ಕೆ ತಂದಿರುವ ಈ ವ್ಯವಸ್ಥೆ ಎಷ್ಟರ ಮಟ್ಟಿಗೆ ಯಶಸ್ಸುಗೊಳ್ಳುತ್ತದೆ ಕಾದು ನೋಡಬೇಕಾಗಿದೆ.