ಕಾರವಾರ: ಉತ್ತರಕನ್ನಡದ ಜನರು ಬೆಚ್ಚಿ ಬೀಳುವಂತಹ ಸುದ್ದಿ ಹೊರಬಿದ್ದಿದೆ. ಉತ್ತರಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ.
ಜಿಲ್ಲೆಯ ದಾಂಡೇಲಿ ಸರಕಾರಿ ಆಸ್ಪತ್ರೆಯಲ್ಲಿ ಕರೋನಾ ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿಯಲ್ಲಿ ಈ ಸೋಂಕು ಪತ್ತೆಯಾಗಿದೆ. ಕೆಲವು ದಿನದ ಹಿಂದೆ ಕರೋನಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ಕಣ್ಣು ಊದಿಕೊಂಡಿತ್ತು. ನಂತರ ವೈದ್ಯರು ತಪಾಸಣೆ ನಡೆಸಿದ್ದು ಬ್ಲಾಕ್ ಪಂಗಸ್ ಇರುವುದನ್ನು ದೃಡಪಡಿಸಿದ್ದಾರೆ. ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಈತನನ್ನು ಮಂಗಳೂರಿಗೆ ರವಾನೆ ಮಾಡಲಾಗಿದೆ.
ಕೋವಿಡ್ ಸೋಂಕಿನಿಂದ ಗುಣುಮುಖರಾದ ಮೇಲೂ ಈ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.
- ಮುಖದ ಒಂದೇ ಭಾಗದಲ್ಲಿ ನೋವು ಕಂಡುಬಂದರೆ.
- ಕಣ್ಣುಗಳಲ್ಲಿ ಊತ/ನೋವು ಕಂಡುಬಂದರೆ
- ಮೂಗಿನಲ್ಲಿ ಗಾಳಿಯಾಡದಿರುವಿಕೆ
- ಮೂಗಿನಲ್ಲಿ ರಕ್ತ ಸೋರಿಕೆ.
- ಹಲ್ಲುಗಳು ಸಡಿಲಗೊಳ್ಳುವುದು.
- ಬಾಯಿಯ ಮೇಲ್ಭಾಗದಲ್ಲಿ ಕಪ್ಪು ಅಥವಾ ಕಂದುಬಣ್ಣದ ಕಂಡುಬಂದರೆ.
- ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ ಕಂಡುಬಂದರೆ.