ಕಾರವಾರ : ಉತ್ತರಕನ್ನಡದಲ್ಲಿ ಜೂನ್ 7ರ ವರೆಗೆ ಸಂಪೂರ್ಣ ಲಾಕ್‌ಡೌನ್ ಗೆ ಆದೇಶ ಹೊರಡಿಸಲಾಗಿದ್ದು, ಉತ್ತರಕನ್ನಡದಲ್ಲಿ ಎರಡು ದಿನ ಮಾತ್ರ ಖರೀದಿಗೆ ಅವಕಾಶ ನೀಡಲಾಗಿದೆ.
ಪ್ರತಿ ಮಂಗಳವಾರ ಮತ್ತು ಶುಕ್ರವಾರ ಮಾತ್ರ ಬೆಳಿಗ್ಗೆ 6 ರಿಂದ 10ರ ವರೆಗೆ ಕಿರಾಣಿ ಖರೀದಿಗೆ ಅವಕಾಶ ನೀಡಲಾಗಿದೆ. ಉಳಿದ ದಿನಗಳಲ್ಲಿ ಅಗತ್ಯ ವಸ್ತುಗಳು ತರಕಾರಿ ಮತ್ತು ದಿನಸಿಗಳನ್ನು ಮನೆ ಮನೆಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಖಾಸಗಿ ವಾಹನ ಸಂಚಾರಗಳನ್ನು (ವೈದ್ಯಕೀಯ ಸೇವೆ,ಅತಿ ತುರ್ತು ಸೇವೆಗಳನ್ನು ಹಾಗೂ ಸರ್ಕಾರಿ ನೌಕರರನ್ನು ಅಧಿಕೃತ ಗುರುತು ಚೀಟಿ ಇದ್ದಲ್ಲಿ ಮಾತ್ರ ಹೊರತುಪಡಿಸಿ) ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಆದೇಶ ಪ್ರತಿ ಇಲ್ಲಿದೆ.