ಕಾರವಾರ : ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ಪ್ರಕಾರ ರವಿವಾರ 978 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, 18 ಜನ ಕೊರೋನಾಗೆ ಬಲಿಯಾಗಿದ್ದಾರೆ.

ಜಿಲ್ಲಾಡಳಿತದ ವರದಿ ಪ್ರಕಾರ ಕಾರವಾರದಲ್ಲಿ 67, ಅಂಕೋಲಾದಲ್ಲಿ 62, ಕುಮಟಾದಲ್ಲಿ 31, ಹೊನ್ನಾವರ 213, ಭಟ್ಕಳದಲ್ಲಿ 56, ಶಿರಸಿಯಲ್ಲಿ 160, ಸಿದ್ದಾಪುರದಲ್ಲಿ 126 , ಯಲ್ಲಾಪುರದಲ್ಲಿ 52, ಮುಂಡಗೋಡ 52, ಹಳಿಯಾಳದಲ್ಲಿ 62, ಮತ್ತು ಜೋಯಿಡಾದಲ್ಲಿ 97 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಕಾರವಾರ 5, ಅಂಕೋಲಾ 1, ಹೊನ್ನಾವರ 3, ಭಟ್ಕಳ 3, ಶಿರಸಿ 2, ಸಿದ್ದಾಪುರ, ಯಲ್ಲಾಪುರ 1, ಹಳಿಯಾಳ 1, ಜೋಯ್ಡಾ 1, ಸಾವಾಗಿದ್ದು ಒಟ್ಟು 18 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಒಟ್ಟು 509 ಕ್ಕೆ ಏರಿಕೆಯಾಗಿದೆ.

RELATED ARTICLES  ರಾಮಾಯಣ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಉತ್ತಮ ಸಾಧನೆ

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 6240 ಆಗಿದ್ದು, ಅವರಲ್ಲಿ 448 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 5792 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ಕಾರವಾರ 92, ಅಂಕೋಲಾ‌ 73, ಕುಮಟಾ 61, ಹೊನ್ನಾವರ 113, ಭಟ್ಕಳ 5, ಶಿರಸಿ 2, ಸಿದ್ದಾಪುರ 272, ಯಲ್ಲಾಪುರ 1, ಮುಂಡಗೋಡ 8, ಹಳಿಯಾಳ 7, ಜೋಯ್ಡಾ 111 ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 745 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  ನಾಪತ್ತೆಯಾಗಿದ್ದ ಮಹಾಬಲೇಶ್ವರ ಗಣಪತಿ ಹೆಗಡೆ ಶವವಾಗಿ ಪತ್ತೆ

ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ ಇದುವೇ ಜನತೆಗೆ ನಮ್ಮ ಕಳಕಳಿಯ ಮನವಿ.