ಕಾರವಾರ : ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ್ ಬುಲೆಟಿನ್ ಪ್ರಕಾರ ಇಂದು 1160 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, 10 ಜನ ಕೊರೋನಾಗೆ ಬಲಿಯಾಗಿದ್ದಾರೆ.

ಜಿಲ್ಲಾಡಳಿತದ ವರದಿ ಪ್ರಕಾರ ಕಾರವಾರದಲ್ಲಿ 40, ಅಂಕೋಲಾದಲ್ಲಿ 49, ಕುಮಟಾದಲ್ಲಿ 176, ಹೊನ್ನಾವರ 105, ಭಟ್ಕಳದಲ್ಲಿ 131, ಶಿರಸಿಯಲ್ಲಿ 128, ಸಿದ್ದಾಪುರದಲ್ಲಿ 119 , ಯಲ್ಲಾಪುರದಲ್ಲಿ 116, ಮುಂಡಗೋಡ 82, ಹಳಿಯಾಳದಲ್ಲಿ 127, ಮತ್ತು ಜೋಯಿಡಾದಲ್ಲಿ 87 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

RELATED ARTICLES  How To Avoid Failure When Outsourcing Software Development

ಕಾರವಾರ 2, ಅಂಕೋಲಾ 2, ಕುಮಟಾ 1, ಹೊನ್ನಾವರ 1, ಶಿರಸಿ 1, ಹಳಿಯಾಳ 2, ಜೋಯ್ಡಾ 1, ಸಾವಾಗಿದ್ದು ಒಟ್ಟು 10 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಒಟ್ಟು 519 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 6338 ಆಗಿದ್ದು, ಅವರಲ್ಲಿ 453 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 5885 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ಕಾರವಾರ 54, ಅಂಕೋಲಾ‌ 38, ಕುಮಟಾ 190, ಹೊನ್ನಾವರ 71, ಭಟ್ಕಳ 65, ಶಿರಸಿ 57, ಸಿದ್ದಾಪುರ 150, ಯಲ್ಲಾಪುರ 188, ಮುಂಡಗೋಡ 27, ಹಳಿಯಾಳ 185, ಜೋಯ್ಡಾ 27 ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 1052 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  ಸಿನಿಮೀಯ ರೀತಿಯಲ್ಲಿ ಬಚಾವಾದ ಸವಾರರು

ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ ಇದುವೇ ಜನತೆಗೆ ನಮ್ಮ ಕಳಕಳಿಯ ಮನವಿ.