ಕಾರವಾರ : ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ಪ್ರಕಾರ ಇಂದು 573 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, 10 ಜನ ಕೊರೋನಾಗೆ ಬಲಿಯಾಗಿದ್ದಾರೆ.

ಜಿಲ್ಲಾಡಳಿತದ ವರದಿ ಪ್ರಕಾರ ಕಾರವಾರದಲ್ಲಿ 37, ಅಂಕೋಲಾದಲ್ಲಿ 12, ಕುಮಟಾದಲ್ಲಿ 89, ಹೊನ್ನಾವರ 148, ಭಟ್ಕಳದಲ್ಲಿ 61, ಶಿರಸಿಯಲ್ಲಿ 35, ಸಿದ್ದಾಪುರದಲ್ಲಿ 111 , ಯಲ್ಲಾಪುರದಲ್ಲಿ 15, ಮುಂಡಗೋಡ 7, ಹಳಿಯಾಳದಲ್ಲಿ 30, ಮತ್ತು ಜೋಯಿಡಾದಲ್ಲಿ 28 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

RELATED ARTICLES  ಕಾಳು ಮೆಣಸಿನ ರಾಣಿಯ ಥೀಮ್ ಪಾರ್ಕ ನಿರ್ಮಾಣದ ಬಗ್ಗೆ ಸ್ಥಳ ವೀಕ್ಷಣೆ ನಡೆಸಿದ ವೀರೇಂದ್ರ ಹೆಗ್ಗಡೆ.

ಹೊನ್ನಾವರ 1, ಶಿರಸಿ 3, ಯಲ್ಲಾಪುರ 3, ಮುಂಡಗೋಡ 2, ಹಳಿಯಾಳ 1, ಸಾವಾಗಿದ್ದು ಒಟ್ಟು 10 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಒಟ್ಟು 541 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 5916 ಆಗಿದ್ದು, ಅವರಲ್ಲಿ 503 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 5413 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ಕಾರವಾರ 60, ಅಂಕೋಲಾ‌ 97, ಕುಮಟಾ 75, ಹೊನ್ನಾವರ 15, ಭಟ್ಕಳ 23, ಶಿರಸಿ 180, ಸಿದ್ದಾಪುರ 11, ಯಲ್ಲಾಪುರ 123, ಮುಂಡಗೋಡ 92, ಹಳಿಯಾಳ 71, ಜೋಯ್ಡಾ 26 ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 773 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  ಕಾಡಿನ ರೈತ’ ಎಂದೇ ಹೆಸರಾದ ಹಾರ್ನ್‌ಬಿಲ್ ಹಕ್ಕಿಯ ಹಬ್ಬ ಇಂದಿನಿಂದ ಪ್ರಾರಂಭ

ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ ಇದುವೇ ಜನತೆಗೆ ನಮ್ಮ ಕಳಕಳಿಯ ಮನವಿ.