ಕುಮಟಾ: ಮೂಲದ ಹುಬ್ಬಳ್ಳಿ ರೋಟರಿ ಕ್ಲಬ್ಬಿನ ಸದಸ್ಯರು, ಉದ್ಯಮಿಗಳೂ, ಆದ ವಿವೇಕ ನಾಯಕರು ಕೊರೊನಾದಿಂದ ತತ್ತರಿಸುತ್ತಿರುವ ತಮ್ಮೂರಿನ ಜನರ ಸಹಕಾರಕ್ಕೆ ಧಾವಿಸಿ, ಒಂದು ಲಕ್ಷ ರು. ಮೌಲ್ಯದ ಅತ್ಯಾವಶ್ಯಕ ಔಷಧಿಯನ್ನು ಕುಮಟಾ ರೋಟರಿ ಮೂಲಕ ಆಸ್ಪತ್ರೆಗೆ ಕೊಡುವ ವ್ಯವಸ್ಥೆ ಮಾಡಿದರು. ರೋಟರಿ ಅಧ್ಯಕ್ಷ ಶಶಿಕಾಂತ ಕೊಲೇಕರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗಣೇಶ್ ನಾಯ್ಕರಿಗೆ ಔಷಧಿಗಳ ಕಿಟ್ ಅಲ್ಲದೇ ೧೦೦ ಉತ್ಕೃಷ್ಟಮಟ್ಟದ ಎನ್. ೯೫ ಮುಖಗವಸುಗಳನ್ನು ಡಾ.ಆಜ್ಞಾ ನಾಯಕರಿಗೆ ಹಸ್ತಾಂತರಿಸಿದರು.

RELATED ARTICLES  ರಾಜ್ಯಮಟ್ಟದ ಕರಾಟೆ ಚಾಂಪಿಯನ್‍ಶಿಪ್ ನಲ್ಲಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಅತ್ಯುತ್ತಮ ಸಾಧನೆ

ಕಠಿಣ ಪರಿಸ್ಥಿತಿಗಳಲ್ಲಿ ಸತತವಾಗಿ ನೆರವಾಗುತ್ತಿರುವ ರೋಟರಿಯ ಕಾರ್ಯವನ್ನು ತಾಲೂಕಾ ಆರೋಗ್ಯಾಧಿಕಾರಿಗಳು ಹಾಗೂ ಡಾ.ಶ್ರೀನಿವಾಸ ನಾಯಕ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಕುಮಟಾ ರೋಟರಿಯ ಅತುಲ್ ಕಾಮತ, ಜೈವಿಠಲ್ ಕುಬಾಲ, ಸಿಎ ವಿನಾಯಕ ಹೆಗಡೆ, ಸಂದೀಪ ನಾಯಕ, ರೋಟ್ರಾö್ಯಕ್ಟ್ ಅಧ್ಯಕ್ಷ ಸುದರ್ಶನ ಶಾನಭಾಗ ಮೊದಲಾದವರಿದ್ದರು.

RELATED ARTICLES  ಹೃನ್ಮನಗಳನ್ನು ಸೂರೆಗೊಂಡ ಶ್ರೀ ಶಾಂತಿಕಾ ವಿಜಯ ಕಥಾ ನೃತ್ಯ ರೂಪಕ