ಕುಮಟಾ : ರೋಟರಾಕ್ಟ್ ಕ್ಲಬ್ ಕುಮಟಾ ವತಿಯಿಂದ ಫ್ರಂಟ್ ಲೈನ್ ಕೋವಿಡ್ ವಾರಿಯರ್ಸ್ ಅವರಿಗೆ ಮಹಾಮಾರಿ ಕೋವಿಡ್ ಸಂದರ್ಭದ ಅನನ್ಯ ಸೇವೆಯ ಮೆಚ್ಚುಗೆಗೆ ಹಾಗೂ ಅವರಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಕಲ್ಲಂಗಡಿ ಹಣ್ಣುಗಳನ್ನು ವಿತರಿಸಲಾಯಿತು . ಲಾಕ್ ಡೌನ್ ಪರಿಣಾಮದಿಂದ ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೆ ಕಂಗಾಲಾಗಿದ್ದ ಗೋಕರ್ಣ ಭಾಗದ ರೈತರಿಂದ ಖರೀದಿಸಿ ರೋಟರಿ ಸದಸ್ಯರಾದ ಯೋಗೀಶ್ ಜಿ ಕಾಮತ್ ಅವರು ನೀಡಿದ್ದಾರೆ . ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸುದಶ೯ನ ಶಾನಭಾಗ , ಕಾಯ೯ದಶಿ೯ ಪವನ್ ಪ್ರಭು ,‌ವಿನಾಯಕ ನಾಯ್ಕ, ಶಿವರಾಮ್ ಮಡಿವಾಳ , ಪವನ್ ಗುನಗಾ, ರವಿಕಿರಣ್ ಕುಂಬಾರಮಕ್ಕಿ , ಯೋಗೀಶ್ ನಾಯ್ಕ ಇದ್ದರು .

RELATED ARTICLES  ಪರಿಹಾರಕ್ಕಾಗಿ ಕಚೇರಿಗೆ ಅಲೆಯುತ್ತಿರುವ ನಿರಾಶ್ರಿತರ ಸ್ಥಿತಿ ದುರದೃಷ್ಟಕರ; ಸ್ವರ್ಣವಲ್ಲಿ ಶ್ರೀ