ಅಂಕೋಲಾ: ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಿಂದ ಅತ್ಯಾಧುನಿಕ ನಾಲ್ಕು ಆಂಬ್ಯುಲೆನ್ಸ್‍ಗಳನ್ನು ಡಿಸಿ ಮುಲ್ಲೈ ಮುಗಿಲನ್ ಸಮ್ಮುಖದಲ್ಲಿ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಆರೋಗ್ಯ ಇಲಾಖೆಗೆ ಹಸ್ತಾಂತರಿಸಿದರು.
ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರಕ್ಕೆ 4 ಸುಸಜ್ಜಿತ ಅಂಬ್ಯುಲೆನ್ಸ್, 2 ವೆಂಟಿಲೇಟರ್, ಮತ್ತು 2 ಆಕ್ಸಿಜನ್ ಸಹಿತವಾಗಿದೆ. ಒಂದು ಕಾರವಾರ ನಗರಕ್ಕೆ ಮತ್ತು ಒಂದು ಗ್ರಾಮೀಣ ಭಾಗದ ದೇವಳಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮತ್ತು ಒಂದು ಅಂಕೋಲಾ ನಗರ ತಾಲೂಕು ಆಸ್ಪತ್ರೆಗೆ ಮತ್ತು ಒಂದು ಅಂಕೋಲಾ ಗ್ರಾಮೀಣ ಭಾಗದ ರಾಮನಗುಳಿ ಪ್ರಾಥಮಿಕ ಆರೊಗ್ಯ ಕೇಂದ್ರಕ್ಕೆ ಜನರ ಸೇವೆಗೆ ಲಭ್ಯವಾಗಲಿದೆ.
ವೆಂಟಿಲೇಟರ್ ಇರುವ ಅಂಬ್ಯುಲೆನ್ಸ್ ನಮ್ಮ ಕ್ಷೇತ್ರದಲ್ಲಿ ಅಷ್ಟೇ ಅಲ್ಲಾ ನಮ್ಮ ಉತ್ರ ಕನ್ನಡ ಜಿಲ್ಲೆಯಲ್ಲೂ ಇಲ್ಲದೇ ಇರುವುದರಿಂದ ರೋಗಿಗಳಿಗೆ ಸಾಗಿಸಲು ತುಂಬಾ ತೊಂದರೆ ಆಗುತ್ತಿತ್ತು, ಮತ್ತು ನಮ್ಮ ಜಿಲ್ಲೆಗೆ ಅಂತಹ ಸುಸಜ್ಜಿತ ಅಂಬ್ಯುಲೆನ್ಸ್ ತರುವುದು ನನ್ನ ಕನಸ್ಸಾಗಿತ್ತು, ಇತ್ತಿಚೆಗೆ ಕೋರೊನಾ ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಹರಡುತ್ತಿದೆ, ಈ ಸಂದರ್ಭದಲ್ಲಿ ನನ್ನ ಕ್ಷೇತ್ರದ ಜನರು ಕೊವಿಡ್ ಸೊಂಕಿತರು ಅಂಬ್ಯುಲೆನ್ಸ್ ಇಲ್ಲದೆ ಪರದಾಡುವಂತಾಗಬಾರದು ಮತ್ತು ಇತರೆ ಕಾಯಿಲೆ ಇರುವ ರೋಗಿಗಳಿಗು ಕೂಡ ತೊಂದರೆ ಆಗಬಾರದೆನ್ನುವ ಮೂಲಕ ಕ್ಷೇತ್ರದ ಜನರ ಆರೋಗ್ಯದ ಹಿತದೃಷ್ಟಿಯಿಂದ ತುರ್ತು ಪರಿಸ್ಥಿತಿಯಲ್ಲಿ ಉಪಯೋಗವಾಗುವಂತೆ ತುಂಬಾ ಅವಶ್ಯಕತೆ ಇರುವುದರಿಂದ ಎರಡೂ ತಾಲೂಕಿಗೆ ವೆಂಟಿಲೇಟರ್ ಅಂಬ್ಯುಲೆನ್ಸ್ ನನ್ನ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಿಂದ ನೀಡಿದ್ದೇನೆ ಎಂದರು.
ಈ ಸಂಧರ್ಬದಲ್ಲಿ ರಾಜ್ಯದ ಮುಖ್ಯಮಂತ್ರಿ ಯಡಿಯುರಪ್ಪ ರವರಿಗೆ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಬಳಸಿಕೊಳ್ಳಲೂ ಅನುಮತಿ ನೀಡಿರುವುದಕ್ಕೆ ಧನ್ಯವಾದ ಹೇಳಿದರು. ಈ ಅಂಬ್ಯುಲೆನ್ಸ್ ನಲ್ಲಿ ವಿಲ್ವೇರ್, ಸೆಕ್ಷನ್ ಪಂಪ್, ಮಲ್ಟಿ ಪ್ಯಾರಾ ಮಾನಿಟರ್, (ಇಸಿಜಿ,ಬಿಪಿ,ಆಕ್ಸಿಮೀಟರ್) ಡೆಸಿಬ್ಲೆಟರ್, ಸಿರಿಂಜೃಂಪ್, ಟ್ರಾನ್ಸಪೆರ್ಟ ವೆಂಟಿಲೇಟರ್ ಇರಲಿದೆ ಅತ್ಯಾಧುನಿಕ, ಸುಸಜ್ಜಿತ ಅಂಬ್ಯುಲೆನ್ಸ್ ಗಳಾಗಿವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶರದ್ ನಾಯ್ಕ, ಕಾರವಾರ ಕ್ರಿಮ್ಸ್ ನ ಅಧಿಕಾರಿಗಳು, ವೈದ್ಯಾಧಿಕಾರಿಗಳು, ನಗರಸಭೆಯ ಅಧ್ಯಕ್ಷರು, ಪೌರಾಯುಕ್ತರು, ಸದಸ್ಯರು, ಬಿಜೆಪಿ ಪಕ್ಷದ ಪ್ರಮುಖರು, ಪೆÇೀಲಿಸ್ ಅಧಿಕಾರಿಗಳು ಉಪಸ್ಥಿತರಿದ್ದರು.