ಕುಮಟಾ :ಮಾನವೀಯ ಸೇವೆಯಲ್ಲಿ ಕೇಳಿ ಬರುವದೇ ಆರ್. ಎಸ್. ಎಸ್ ಹೆಸರು. ಸೇವೆಯ ಪರ್ಯಾಯ ಹೆಸರೆಂದರೆ ಆರ್. ಎಸ್. ಎಸ್ ಎನ್ನುವ ಮಟ್ಟಿಗೆ ಜನರ ಮನಸ್ಸಿನಲ್ಲಿ ಕುಳಿತಿದೆ. ಯುದ್ಧ, ನಿಸರ್ಗ ವಿಕೋಪ, ಅವಘಡ ಇತ್ಯಾದಿ ಎಲ್ಲಾ ಸಂದರ್ಭದಲ್ಲಿ ಆರ್. ಎಸ್. ಎಸ್. ನ ಮಾನವೀಯ ಸೇವೆ ಜಗತ್ತಿನಲ್ಲಿಯೇ ಪ್ರಶಂಸೆಗೆ ಒಳಗಾಗಿದ್ದು ಎಲ್ಲರೂ ತಿಳಿದ ವಿಚಾರ.
ಆರ್. ಎಸ್. ಎಸ್. ಸೇವಾ ಭಾರತಿ ಕುಮಟಾ ಘಟಕವು ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ದದ ಯುದ್ಧದಲ್ಲಿ ಮಾನವೀಯ ಕಾರ್ಯ ಮಾಡುತ್ತಿರುವದು ಜನರ ಮೆಚ್ಚುಗೆಗೆ ಕಾರಣವಾಗಿದೆ. ಪೊಲೀಸ್ ಇಲಾಖಾ ಸಿಬ್ಬಂದಿ, ರಕ್ತ ದಾನಿಗಳು, ಆಸ್ಪತ್ರೆ ಸಿಬ್ಬಂದಿಗಳಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿರುವ ಲಾರಿ ಇತ್ಯಾದಿ ಸರಕು ಸಾಗಿಸುತ್ತಿರುವ ವಾಹನ ಚಾಲಕರಿಗೆ ಆಹಾರ, ನೀರು ಇತ್ಯಾದಿ ನೀಡಿ ಸಹಾಯ ಮಾಡುತ್ತಿದೆ.
ಈ ರೀತಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಹಸಿದು ಸಾಗುವವರಿಗೆ ಆಹಾರ ನೀಡುತ್ತಿರುವದು ಉತ್ತರಕನ್ನಡ ಜಿಲ್ಲೆಯಲ್ಲಿಯೇ ಪ್ರಥಮ ಎನ್ನಲಾಗಿದೆ. ಅನೇಕ ಲಾರಿ ಚಾಲಕರು ಸಂಘಟನೆ ಕಾರ್ಯಕರ್ತರ ಕಾರ್ಯನೋಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಹಸಿದವರಿಗೆ ಆಹಾರ ನೀಡುವ ಈ ಕಾರ್ಯದಲ್ಲಿ ಆರ್ ಎಸ್. ಎಸ್. ದೊಂದಿಗೆ ಕೊಂಕಣ ಎಜುಕೇಶನ್ ಟ್ರಸ್ಟ್. ಆರ್. ಎಸ್.ಎಸ್ ಸಂಘಟನೆಯ ಸ್ವಯಂ ಸೇವಕರು ಇತ್ಯಾದಿ ಕಾರ್ಯಕರ್ತರು ಸೇವೆ ಮಾಡುತ್ತಿದ್ದಾರೆ.