ಮಾನ್ಯ ಕಾರ್ಮಿಕ ಖಾತೆ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರ ಪ್ರಯತ್ನದ ಫಲವಾಗಿ ರಾಜ್ಯ ಸರಕಾರ ಉತ್ತರಕನ್ನಡ ಜಿಲ್ಲೆಗೆ ಸುಮಾರು 38 ತಜ್ಞ ಸ್ಪೇಷಲಿಸ್ಟ ವೈದ್ಯರನ್ನು ನೇಮಕ ಮಾಡಿದೆ.
ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಯ ಅರೋಗ್ಯ ಕ್ಷೇತ್ರದಲ್ಲಿ ಇದ್ದ ಸಮಸ್ಯೆಗೆ ನೂತನ ತಜ್ಞ ವೈದ್ಯರ ನೇಮಕಗೊಂಡಿರುವುದರ ಮೂಲಕವಾಗಿ ಪರಿಹಾರ ದೊರಕಿದಂತಾಗಿದೆ.
ಸಕಾಲಕ್ಕೆ ಜಿಲ್ಲೆಯ ತಜ್ಞ ವೈದ್ಯರನ್ನು ತುರ್ತಾಗಿ ನೇಮಿಸಿದ ರಾಜ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ನವರಿಗೆ ಹಾಗೂ ಆರೋಗ್ಯ ಸಚಿವರಾದ ಡಾ.ಕೆ ಸುಧಾಕರ ಅವರಿಗೆ ಮಾನ್ಯ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದರು.