ಕೋರೋನ ಕಾಯಿಲೆಯನ್ನು ನಿಯಂತ್ರಿಸುವ ಸಲುವಾಗಿ ತಾಲ್ಲೂಕು ಆಡಳಿತವು ನಿಟ್ಟಿನ ಕ್ರಮಗಳನ್ನು ಕೈ ಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿಗಳು ಸೂಚಿಸಿರುತ್ತಾರೆ.ಇದರಂತೆ ದಿನಾಂಕ 31/5/2021 ರಿಂದ ಮುಂದಿನ ಆದೇಶದ ವರೆಗೆ ಪುನಃ ಲಾಕ್ ಡೌನ್ ವ್ಯವಸ್ಥೆಯು ಜಾರಿಯಲ್ಲಿದ್ಧು ಈ ಸಂದರ್ಭದಲ್ಲಿ ಹಣ್ಣು ಹಂಪಲು ತರಕಾರಿಗಳನ್ನು ವ್ಯಾಪಾರಸ್ಥರು ತಳ್ಳುವ ಗಾಡಿ ಅಥವಾ ವಾಹನಗಳ ಮುಖಾಂತರ ಮನೆ ಮನೆಗೆ ಸರಬರಾಜು ಮಾಡುವಂತೆ ಕುಮಟಾ ಪುರಸಭೆ ಸೂಚಿಸಿದೆ.
ದರಪಟ್ಟಿಯನ್ನು ವಾಹನಗಳ ಮೇಲೆ ಅಂಟಿಸಿಕೊಳ್ಳುವಂತೆ ಮತ್ತು ಎಲ್ಲಾ ವಾರ್ಡ್ ಗಳಲ್ಲಿ ಸಂಚರಿಸಿ ಅಲ್ಲಿನ ಜನರಿಗೆ ಗೊತ್ತಾಗುವಂತೆ ಜಾಗಟೆ ಬಾರಿಸುವಂತೆ ವ್ಯಾಪಾರಸ್ಥರಿಗೆ ತಿಳಿಯಪಡಿಸಿದೆ. ಪಟ್ಟಣದ ಗ್ರಾಹಕರು ದಿನಸಿ ಅಂಗಡಿಗಳ ವ್ಯಾಪಾರಸ್ಥರ ವಾಟ್ಸಪ್ ಅಥವಾ ದೂರವಾಣಿ ಮುಖಾಂತರ ಕೋರಿಕೆಯನ್ನು ಸಲ್ಲಿಸುವಂತೆ ಹಾಗೆಯೇ ವ್ಯಾಪಾರಸ್ಥರು ಗ್ರಾಹಕರಿಂದ ಮಾಹಿತಿ ಪಡೆದು ದಿನಸಿ ವಸ್ತುಗಳನ್ನು ತಾವು ನಿಗದಿಪಡಿಸಿಕೊಂಡ ವಾಹನ ಗಳಲ್ಲಿ ಸರಬರಾಜು ಮಾಡಲು ಸೂಚಿಸಿದೆ.
ಸಂಚಾರಿವ್ಯಾಪಾರದ ಮೂಲಕ ದಿನಸಿ ಗಳನ್ನು ಮಾರಾಟ ಮಾಡಲು ಸಹ ಅವಕಾಶ ನೀಡಲಾಗಿದೆ. ಮೆಡಿಕಲ್ ಶಾಪ್. ಆಸ್ಪತ್ರೆಗಳಿಗೆ ಇದು ಅನ್ವಯಿಸುವುದಿಲ್ಲ. ಈ ಮೇಲ್ಕಂಡ ಎಲ್ಲ ಸಂದರ್ಭದಲ್ಲಿ ಮಾಸ್ಕ್. ಸಾಮಾಜಿಕ ಅಂತರ ಕಡ್ಡಾಯ ಗೊಳಿಸಿದೆ. ತಪ್ಪಿದಲ್ಲಿ ಇಂಥವರ ವಿರುದ್ದ ಕ್ರಮ ಕೈಗೊಳ್ಳ ಲಾಗುವುದೆಂದು ತಿಳಿಯ ಪಡಿಸಿದೆ. ಸಾರ್ವಜನಿಕರು ಕೋರೋನ ಮುಕ್ತ ತಾಲ್ಲೂಕನ್ನಾಗಿ ಪರಿವರ್ತಿಸಲು ಸಹಕರಿಸಬೇಕೆಂದು ಕೋರಿದೆ.
ಪೊಲೀಸ್ ಇಲಾಖೆ ಕುಮಟಾ ಮತ್ತು ಪುರಸಭೆ ಕುಮಟಾ ಜಂಟಿ ಸಾರ್ವಜನಿಕ ಪ್ರಕಟಣೆಯ ಮೂಲಕ ಮಾಹಿತಿ ನೀಡಿದೆ.