ಹೊನ್ನಾವರ: ದೇಶ, ರಾಜ್ಯದಲ್ಲಿ ಕೋರೊನಾದ ರುದ್ರತಾಂಡವ ಮುಂದುವರಿದಿದ್ದು ಜಿಲ್ಲೆಯ ಜನ ತೀರಾ ಸಂಕಷ್ಟಕ್ಕೊಳಗಾದ್ದು, ನಾಡಿನ ಜನ ಕೋರೊನಾ ಹಿಮ್ಮೆಟ್ಟಿಸಲು ಪಕ್ಷ ಬೇದ ಮರೆತು ಒಟ್ಟಾಗಿ ಹೋರಾಡುವಂತೆ ಮಾಜಿ ಸಚಿವ ಆರ್. ವಿ. ದೇಶಪಾಂಡೆ ಕರೆ ನೀಡಿದರು. ಕಷ್ಟ ಕಾಲದಲ್ಲಿ ಒಬ್ಬರಿಗೊಬ್ಬರು ನೆರವಾಗುವುದು ಮಾನವಧರ್ಮ ಉಳ್ಳುವರು ಮನಸ್ಸು ಬಿಚ್ಚಿ ಕೋರೊನಾ ರೋಗಿಗಳಿಗೆ ಬೇರೆ ಬೇರೆ ರೀತಿಯಿಂದ ಸಹಕಾರ ನೀಡುವಂತೆ ಮನವಿ ಮಾಡಿದರು. ಅವರು ಇಂದು ಹೊನ್ನಾವರದ ತಹಶೀಲ್ದಾರ ಕಾರ್ಯಾಲಯದಲ್ಲಿ ತಹಶೀಲ್ದಾರ ವಿವೇಕ ಶೇಣ್ವಿ, ತಾಲೂಕಾ ಆರೋಗ್ಯಾಧಿಕಾರಿ, ಶ್ರೀಮತಿ ಉಷಾ ಹಾಸ್ಯಗಾರ, ಹೊನ್ನಾವರ ಆರೋಗ್ಯ ಆಢಳಿತಾಧಿಕಾರಿ ಡಾ|| ರಾಜೇಶ ಕಿಣಿಯವರಿಗೆ ಮೆಡಿಕಲ್ ಕಿಟ್ ಹಸ್ತಾಂತರಿಸಿ ಮಾತನಾಡುತ್ತಿದ್ದರು.

ಕಾಂಗ್ರೆಸ್ ಮುಖಂಡ ಪ್ರಶಾಂತ ದೇಶಪಾಂಡೆ ಮಾತನಾಡಿ ಜಿಲ್ಲೆಯಲ್ಲಿ ಕೋರೊನಾ ವಿರುದ್ಧ ಎಲ್ಲಾ ಸರಕಾರಿ ಅಧಿಕಾರಿಗಳು, ವೈಧ್ಯಾಧಿಕಾರಿಗಳು, ಆಶಾ ಕಾರ್ಯಕರ್ತರು, ಕರೋನಾ ವಾರಿರ‍್ಸಗಳು ಸಮರೋಪಾಧಿಯಲ್ಲಿ ಹೋರಾಡುತ್ತಿದ್ದು, ಜಿಲ್ಲೆಯಾಧ್ಯಂತ ವಿ. ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ ಅವರಿಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿದೆ ಎಂದರು. ಇಂದು ಆರ್. ವಿ. ದೇಶಪಾಂಡೆ ಹೊನ್ನಾವರ ತಹಶೀಲ್ದಾರರಿಗೆ ಹಸ್ತಾಂತರಿಸಿದ ಮೆಡಿಕಲ್ ಕಿಟ್‌ನಲ್ಲಿ ೧೦೦೦ ವಿವಿಧ ಔಷಧಿಗಳನ್ನು ಹೊಂದಿದ ಮೆಡಿಕಲ್ ಕಿಟ್, ೫೮೦ ಎನ್-೯೫ ಮಾಸ್ಕ, ೨೪೫ ಉತ್ತಮ ತಂತ್ರಜ್ಞಾನದ ಒಕ್ಸಿಮೀಟರ್ ನೀಡಿದ್ದು ಇನ್ನೂ ಹೆಚ್ಚಿನ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ ಎಂದರು
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ, ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕೋರೊನಾದಿಂದ ಜಿಲ್ಲೆಯ ಜನ ಕಂಗೆಟ್ಟ ಸಂದರ್ಭದಲ್ಲಿ ಮಾಜಿ ಸಚಿವ ಆರ್. ವಿ. ದೇಶಪಾಂಡೆಯವರು ಪಕ್ಷಬೇದ ಮರೆತು ಜಿಲ್ಲೆಯಾಧ್ಯಂತ ಸಂಚರಿಸಿ ಇಂದು ಹೊನ್ನಾವರ ತಾಲೂಕಿಗೆ ಆಗಮಿಸಿ ಅಗತ್ಯ ಮೆಡಿಕಲ್ ಕಿಟ್ ತಹಶೀಲ್ದಾರರಿಗೆ ಹಸ್ತಾಂತರಿಸಿರುವುದಕ್ಕೆ ಹೊನ್ನಾವರ ಜನತೆಯ ಪರವಾಗಿ ಆರ್. ವಿ. ದೇಶಪಾಂಡೆಯವರಿಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ, ಮಾಜಿ ಶಾಸಕ ಮಂಕಾಳ ವೈದ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬೀಮಣ್ಣ ನಾಯ್ಕ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಎನ್. ಸುಬ್ರಮಣ್ಯ, ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ ಗೌಡ, ದಾಮೋದರ ನಾಯ್ಕ, ಆಗ್ನೇಲ್ ಡಯಾಸ, ಜಕ್ರಿಯಾ ಶೇಖ್, ಬಾಲಚಂದ್ರ ನಾಯ್ಕ, ಇನ್ನೂ ಮುಂತಾದವರು ಪಾಲ್ಗೊಂಡಿದ್ದರು. ಯುವ ಕಾಂಗ್ರೆಸ್ ಅಧ್ಯಕ್ಷ ಸಂದೇಶ ಶೆಟ್ಟಿ ವಂದಿಸಿದರು.

RELATED ARTICLES  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ: ಕಾರವಾರದಲ್ಲಿ ದುರ್ಘಟನೆ