ಕುಮಟಾ : ಕರೋನಾ ಜನತೆಯನ್ನು ಎಡಬಿಡದೆ ಬಾಧಿಸುತ್ತಿದೆ, ನಿತ್ಯ ದುಡಿದು ಜೀವನ ಸಾಗಿಸುವವರಿಗೆ ಕೆಲಸ ಕಾರ್ಯಗಳು ಇಲ್ಲದೆ ಜನ ಕಷ್ಟದಲ್ಲಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅನೇಕರು ಬಡಜನರ ಜೊತೆಗೆ ನಿಂತು ತಮ್ಮ ಔದಾರ್ಯ ಮೆರೆಯುತ್ತಿದ್ದಾರೆ.

ಈ ಕೊರೊನ ಸಂದರ್ಭದಲ್ಲಿ ವಕೀಲರಾದ ಎಂ ಕೆ. ಹೆಗಡೆ, ಆನಂದ ಹೆಗಡೆ ಹಾಗೂ ಚಾರ್ಟಡ್ ಅಕೌಂಟೆಂಟ್ ವಿನಾಯಕ ಹೆಗಡೆ ಇವರು ಇಂದು ಕೂಜಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೂಜಳ್ಳಿ -ಕೋನಳ್ಳಿ -ಹೆಗಲೆ ಗ್ರಾಮದಲ್ಲಿ ತೀರಾ ಕಷ್ಟದಲ್ಲಿರುವ 50 ಕುಟುಂಬಗಳನ್ನು ಗುರುತಿಸಿ, ಆಹಾರ ಸಾಮಗ್ರಿಗಳ ಕಿಟ್ಗಳನ್ನು ಕೂಜಳ್ಳಿ ಪಂಚಾಯತ್ ಅಧ್ಯಕ್ಷರಿಗೆ /ಪಿಡಿಓ ಅವರಿಗೆ ಹಸ್ತಾಂತರಿಸಿ ಇದನ್ನು ಆಯಾ ಕುಟುಂಬಗಳಿಗೆ ವಿತರಿಸಲು ವಿನಂತಿಸಿದರು .

RELATED ARTICLES  ಬಯಸಿದ ಚುನಾವಣಾ ಚಿನ್ಹೆ ಪಡೆಯುವಲ್ಲಿ ಗೆದ್ದ ನಿಧಿ ದೇಶಭಂಡಾರಿ

ಈ ಸಂದರ್ಭದಲ್ಲಿ ದಾನಿಗಳು ಮಾತನಾಡುತ್ತ , ನಮ್ಮ ಊರಿನಲ್ಲಿ ಯಾರಿಗೆ ಆದರೂ ಆರೋಗ್ಯದ ತೊಂದರೆ ಉಂಟಾದಲ್ಲಿ ಸಹಾಯದ ಅಗತ್ಯವಿದ್ದರೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

RELATED ARTICLES  ಕರ್ತವ್ಯ ನಿರತ ಬಸ್ ಚಾಲಕನ‌ ಮೇಲೆ ಬೈಕ್ ಸವಾರನಿಂದ ಹಲ್ಲೆ

IMG 20210601 WA0002

ಈ ಸಮಯದಲ್ಲಿ ಪಂಚಾಯತ್ ಪಿಡಿಒ ಮತ್ತು ಪಂಚಾಯತ್ ಅಧ್ಯಕ್ಷ ರಾದ ಜಿ.ಎಸ್ ನಾಯ್ಕ ಹಾಗೂ ಪಂಚಾಯತ್ ಸದಸ್ಯರು ಹಾಜರಿದ್ದು ಎಂ ಕೆ. ಹೆಗಡೆ, ಆನಂದ ಹೆಗಡೆ ಹಾಗೂ ಚಾರ್ಟಡ್ ಅಕೌಂಟೆಂಟ್ ವಿನಾಯಕ ಹೆಗಡೆಯವರಿಗೆ ಕೃತಜ್ಞತೆ ತಿಳಿಸಿದರು.

ಕಷ್ಟದ ಸಂದರ್ಭಗಳು ಎದುರಾದಾಗ ಇವರು ಸದಾ ಜನತೆಯ ಜೊತೆಗಿದ್ದು ಸ್ಪಂದಿಸುವ ಕಾರ್ಯ ಹಿಂದಿನಿಂದಲೂ ನಡೆದು ಬಂದಿದೆ ಅದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.