ಅಪ್ಪಟ ಹಿಂದೂ ವಾದಿಯಾಗಿ ಕೆನರಾ ಲೋಕಸಭಾ ಸದಸ್ಯರಾಗಿರುವ ಅನಂತಕುಮಾರ್ ಹೆಗಡೆ ಅವರು ಇಂದು ಮೋದಿ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಶುಭ ಸಂದರ್ಭದಲ್ಲಿ ಕುಮಟಾದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು .ಸತತ ಐದು ಬಾರಿ ಅಪಾರ ಜನ ಬೆಂಬಲ ಪಡೆದು ಆಯ್ಕೆಯಾಗಿ ಕೆನರಾ ಲೋಕಸಭಾ ಸದಸ್ಯರಾಗಿದ್ದ ಅನಂತಕುಮಾರ್ ಹೆಗಡೆಯವರಿಗೆ ಮೋದಿ ಸಂಪುಟದಲ್ಲಿ ಸ್ಥಾನ ಸಿಕ್ಕಿರುವುದು ಸಂತೋಷದ ವಿಷಯ . ಅಪ್ಪಟ ಹಿಂದೂ ವಾದಿಯಾಗಿ ಅಪಾರ ಜನ ಬೆಂಬಲ ಪಡೆದಿರುವ ಅನಂತ್ ಕುಮಾರ್ ಅವರಿಗೆ ಈ ಸ್ಥಾನ ದೊರೆತಿರುವುದಕ್ಕೆ ನಾಗರಾಜ್ ನಾಯಕ ತೊರ್ಕೆ ಸಂತಸ ವ್ಯಕ್ತಪಡಿಸಿದ್ದಾರೆ .

RELATED ARTICLES  ಗಜನಿ ಸಂರಕ್ಷಣಾ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕಿ ಶಾರದಾ ಮೋಹನ ಶೆಟ್ಟಿ.

ಮೋದಿಯವರ ಸಂಪುಟದಲ್ಲಿ ಅನಂತಕುಮಾರ್ ಹೆಗ್ಡೆಗೆ ಸ್ಥಾನ ಸಿಕ್ಕಿದ್ದು ಉತ್ತರ ಕನ್ನಡಕ್ಕೆ ಅಪಾರ ಸಂತಸದ ವಿಷಯ ಈ ಸಂತಸವನ್ನು ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ಹಂಚಿಕೊಳ್ಳುತ್ತೇನೆ ಎಂದು ಬೆಳಕು ಸಂಸ್ಥೆಯ ಅಧ್ಯಕ್ಷ ಹಾಗೂ ಬಿ ಜೆ.ಪಿ ಮುಖಂಡ ನಾಗರಾಜ್ ನಾಯಕ್ ತೊರ್ಕೆ ಅಭಿಪ್ರಾಯ ಪಟ್ಟರು.

RELATED ARTICLES  ಶಿರಸಿಯಲ್ಲಿ ಪ್ರದರ್ಶನ ಕಂಡಿತು ಅಂಗದಾನಗಳು ಪುರಾಣ ಸಮ್ಮತವೇ? ಕುರಿತಾದ ಪರಿಕಲ್ಪನೆಯ ರೂಪಕ

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದಿನಕರ ಶೆಟ್ಟಿ, ಡಾ.ಜಿ ಜಿ ಹೆಗಡೆ, ಸೂರಜ್ ನಾಯ್ಕ ಸೋನಿ, ಎಂ.ಜಿ ಭಟ್ಟ, ಕುಮಾರ ಮಾರ್ಕಂಡೇಯ ಇನ್ನಿತರರು ಹಾಜರಿದ್ದರು.