ಉತ್ತರಕನ್ನಡ ಜಿಲ್ಲೆಯ ಕುಮಟಾದ ಕಾಗಾಲ ಎಂಬ ಊರು ಹಿಂದು ಜೈನ  ಇಸ್ಲಾಂ ಧರ್ಮದ ಸಂಗಮ. ಇಲ್ಲಿನ ಅಂಗಡಿಕೇರಿ ಎಂಬ ಪ್ರದೇಶದಲ್ಲಿ ಇರುವ ಜೈನಕುಟುಂಬದವರು ಎಲ್ಲರೊಂದಿಗೂ ಸಹಬಾಳ್ವೆಯಿಂದ ಇದ್ದಾರೆ.ಕೃಷಿಯೇ ಪ್ರಧಾನ ವೃತ್ತಿ ಆಗಿದ್ದ ಕಾಲದಲ್ಲಿ ಊರಿನ ಹೆಚ್ಚು ಜಮೀನಿನ ಒಡೆಯರೂ ಇವರೇ ಆಗಿದ್ದರು.ಕಾಲಾನಂತರದ ಬದಲಾವಣೆಯಲ್ಲಿ ಬೇರೆ ಬೇರೆ ಉದ್ಯೋಗ ಅರಸಿ ಕೆಲವರು ಊರಿಂದ ಹೊರಗೆ ಹೋಗಿ  ನೆಲೆಸಿದರೂ ಜನ್ಮ ಭೂಮಿಯ ನಂಟು ಇನ್ನೂ ಉಳಿಸಿಕೊಂಡಿದ್ದಾರೆ.

ಪ್ರಸಾದ ಜೈನ್ ಎಂಬ ಸಜ್ಜನ ಯುವಕ ಸಣ್ಣಪುಟ್ಟ ಕೆಲಸಮಾಡಿಕೊಂಡು ಎಲ್ಲರೊಂದಿಗೂ ಕಲೆತು ಕೊಂಡಿದ್ದು  “ನೀಡು ಶಿವಾ ನೀಡದಿರೂ ಶಿವಾ ಬಾಗುವುದು ಎನ್ನಕಾಯ”  ಎಂದು ಎಲ್ಲರಿಗೂ ವಿಧೇಯನಾಗಿ ಪ್ರಸ್ತುತ ಸ್ಥಳೀಯ ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡಿಕೊಂಡು ಬಂದ ಸಂಬಳದಲ್ಲಿ ತಂದೆ ತಾಯಿ ಮಡದಿ ಹಾಗೂ ಒಬ್ಬಳು ಮುದ್ದಾದ ಮಗಳೊಂದಿಗೆ ನೆಮ್ಮದಿಯ ಸಂಸಾರ ಮಾಡಿಕೊಂಡಿದ್ದವರು.ಆಕಸ್ಮಿವಾಗಿ ಅವರ  ಬಾಳಿನಲ್ಲಿ ವಿಧಿ ಭಯಂಕರ ಬರೆಯನ್ನು ಎಳೆದು ಬಿಟ್ಟಿದೆ.ಜ್ವರ ಬಂದಿದೆ ಎಂದು ಮುದ್ದು ಮಗಳು ರಿತಿ ಯನ್ನು ಆಸ್ಪತ್ರೆಗೆ ಕರೆದು ಕೊಂಡು ಹೋದರೆ ಆಕೆ ರಕ್ತದ ಕ್ಯಾನ್ಸರ್ ಇರುವುದಾಗಿ ತಿಳಿದು ಬಂದಿದೆ.ಹಾಗೂ ಆರಂಭದ ಹಂತದಲ್ಲಿ ಅದು ಇರುವುದರಿಂದ ಗುಣಪಡಿಸುವ ಭರವಸೆಯನ್ನೂ ವೈದ್ಯಲೋಕ ನೀಡಿದೆ.ಮುದ್ದಿನ ಮಗಳ ಪರಿಸ್ಥಿತಿ ನೋಡಿ ಇಡೀ ಕುಟುಂಬ ಕಂಗಾಲಾಗಿ ಕಣ್ಣೀರು ಇಡುತ್ತಿದೆ.ಪ್ರಸಾದ ಜೈನರ ಆತ್ಮೀಯ ವಲಯವೂ ಕೂಡ ಈ ವಿಷಯ ಕೇಳಿ ನೋವಿನಿಂದ ಚಡಪಡಿಸುತ್ತಿದೆ.ಈ ಕಾಯಿಲೆಯ ಚಿಕಿತ್ಸೆಗೆ ಸುಮಾರು  ಹದಿನೈದು ಲಕ್ಷ ರೂಪಾಯಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.ಈಗಾಗಲೇ ರಿತಿ ಜೈನ್ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ಆರಂಭವಾಗಿದೆ.

RELATED ARTICLES  ಅಕ್ಷರ ಜ್ಞಾನದ ಕೊರತೆಯಿಂದಾಗಿ ಭಾರತವು ಜಗತ್ತಿನಲ್ಲಿ ಹಿಂದುಳಿಯಲಿಕ್ಕೆ ಕಾರಣವಾಗಿದೆ: ಬಾಲಚಂದ್ರ ಜಾರಕಿಹೊಳಿ

ಕುಮಟಾದ ಕೆಲವು ಯುವಕರು ಮಣಿಪಾಲ್ ಆಸ್ಪತ್ರೆಗೆ ಹೋಗಿ ತುರ್ತು ಬೇಕಾದ ರಕ್ತವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ .ಪುರಾಣದ ಮಾರ್ಕಾಂಡೇಯನಂತೆ ನನ್ನೂರಿನ ಪುಟಾಣಿ ಮಗಳು ರಿತಿ ಜೈನ್ ಸಾವನ್ನು ಗೆದ್ದು ನಗುನಗುತ್ತಾ ಮತ್ತೆ ಮನೆ ಮನ ಬೆಳಗಬೇಕಿದೆ.ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ರಿತಿ ಜೈನಳನ್ನು ಕಾಪಾಡುತ್ತಾನೆ ಎಂಬ ಭರವಸೆ ನಮಗೆಲ್ಲರಿಗೂ ಇದೆ.ಪ್ರಸಾದ ಜೈನ ಪರಿವಾರಕ್ಕೆ ಎದುರಾದ ಈ ಧರ್ಮಸಂಕಟದಿಂದ ಅವರನ್ನು ಪಾರುಮಾಡುವತ್ತ ಅವರ ನೋವಿಗೆ ಸ್ಪಂದಿಸಲು ಚಿಕಿತ್ಸೆಗೆ ಅಗತ್ಯವಾದ ಹಣಕಾಸು ಕೊಂದಿಕೆ ಆಗುವಲ್ಲಿ ಯಾರಿಗೆಲ್ಲ ಸಾಧ್ಯವಿದೆಯೋ ಅವರೆಲ್ಲರೂ ಮಾನವೀಯ ನೆಲೆಯಿಂದ ನಿಮ್ಮದೇ ಮನೆಯ ಮಗಳು ರಿತಿ ಎಂದು ತಿಳಿದು ಸಹಾಯಮಾಡುವುದರ ಮೂಲಕ ರಿತಿ ಕ್ಯಾನ್ಸರ್ ವಿರುದ್ಧದ ಸಂಗ್ರಾಮದಲ್ಲಿ ಗೆದ್ದು ಬರುವಂತೆ ಮಾಡಬೇಕಿದೆ.ಕಾರಣ ಸಹಾಯ ಮಾಡಬಯಸುವವರು ಈ ಕೆಳಗಿನ ಬ್ಯಾಂಕ್ ಅಕೌಂಟ್ ಗೆ ನೇರವಾಗಿ ಹಣ ಸಂದಾಯ ಮಾಡಬಹುದಾಗಿದೆ.

RELATED ARTICLES  ರಾಜ್ಯ ಸರ್ಕಾರದ ವಿರುದ್ಧ ಒಂದು ಮಾತೂ ಹೇಳದ ನಟ ನೇರವಾಗಿ ಮೋದಿ ಬಗ್ಗೆ ಮಾತನಾಡುತ್ತಿದ್ದಾರೆ!

*BANK ACCOUNT DETAILSS
**BANK NAME– KARNATAKA VIKAS
GRAMIN BANK*
*BRANCH– KAGAL*
*ACCOUNT NO–17216334355*
*IFSC–KVGB0009352*
*ACCOUNT HOLDER NAME–PRASAD S JAIN   phone G-pay no  9008205746

ಬರಹ : ಚಿದಾನಂದ ಭಂಡಾರಿ ಕಾಗಾಲ