ಅಂಕೋಲಾ: ಲಾಕ್ ಡೌನ್ ಸಂದರ್ಭದಲ್ಲಿ ಅತೀ ವಿರಳ ಎಂಬಂತಿದ್ದ ಅಪಘಾತ ಪ್ರಕರಣ ಇದೀಗ ಮತ್ತೆ ವರದಿಯಾಗುತ್ತಿದ್ದು ನೋವಿನ ಸಂಗತಿಯಾಗಿದೆ.

ಇಂದು ಬೆಳಿಗ್ಗೆ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ಅಂಕೋಲಾ ತಾಲೂಕಿನ ಹೊನ್ನಳ್ಳಿ ಪಾರೆಸ್ಟ ನಾಕ್ ಬಳಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದೆ ಈ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

RELATED ARTICLES  ಶಿರಸಿಯ ಆಸ್ಪತ್ರೆ, ಡಾಕ್ಟರ್ ಕುರಿತು ವಿಡಿಯೋ ಅಭಿಪ್ರಾಯ ಹೇಳಿದ್ದ ಆದಿತ್ಯ ಹೆಗಡೆ ವಿರುದ್ಧ ₹1 ಕೋಟಿ ಮಾನನಷ್ಟ ಮೊಕದ್ದಮೆ

ಶಿರಗುಂಜಿಯ ಸಗಡೇಬೇಣದ ಬೊಮ್ಮಯ್ಯ ರಾಮ ಗೌಡ ಎಂಬಾತನೇ ಮೃತಪಟ್ಟ ಬೈಕ್ ಸವಾರ. ಬೈಕ್ನಲ್ಲಿ ಇಬ್ಬರೂ ಪ್ರಯಾಣಿಸುತ್ತಿದ್ದು ಇನ್ನೋರ್ವ ಸಹಪ್ರಯಾಣಿಕ ಮಂಜುನಾಥ್ ತುಳಸು ಗೌಡ ಗಂಭೀರ ಗಾಯಗೊಂಡಿದ್ದಾನೆ ಎನ್ನಲಾಗಿದೆ.ಗಂಭೀರ ಗಾಯಗೊಂಡವನನ್ನು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲಾಗಿದೆ.

RELATED ARTICLES  ಸಾರ್ವಭೌಮ ಗುರುಕುಲ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ

ಬೈಕಿಗೆ ಬಡಿದಿರುವುದು ಅರಣ್ಯ ಇಲಾಖೆಗೆ ಸಸಿ ಸಾಗಿಸುವ ಲಾರಿ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.