ಕುಮಟಾ : ತಾಲೂಕಿನ ಭಾರತೀಯ ಜನತಾ ಪಕ್ಷದ ವತಿಯಿಂದ ಇಂದು ಸನ್ಮಾನ್ಯ ಶಾಸಕ ಶ್ರೀ ದಿನಕರ ಶೆಟ್ಟಿಯವರ ನೇತೃತ್ವದಲ್ಲಿ, ಅನೇಕ ದಾನಿಗಳು ಹಾಗೂ ಶಾಸಕ ಶ್ರೀ ದಿನಕರ ಶೆಟ್ಟಿಯವರು ನೀಡಿದ ಕೊಡುಗೆಯ ಸಹಾಯದಿಂದ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ಇಂದು ಪುಡ್ ಕಿಟ್ ಅನ್ನು ವಿತರಿಸಲಾಯಿತು.

ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಿ, ಕೆಲವು ಜನರಿಗೆ ಸಾಂಕೇತಿಕವಾಗಿ ಪುಡ್ ಕಿಟ್ ವಿತರಣೆ ಮಾಡಿದ್ದಲ್ಲದೇ, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಮ‌ೂಲಕ ಮನೆ ಮನೆಗೆ 200 ಪುಡ್ ಕಿಟ್ ವಿತರಿಸಲಾಯಿತು..
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಶ್ರೀ ದಿನಕರ ಶೆಟ್ಟಿಯವರು, ಕುಮಟಾ ತಾಲ್ಲೂಕಿನಲ್ಲಿ ಒಟ್ಟು 5000 ಪುಡ್ ಕಿಟ್ ಅನ್ನು ವಿತರಿಸುವ ಗುರಿಯನ್ನು ಹೊಂದಿದ್ದೇವೆ ಎಂದು ತಿಳಿಸಿದರು.

RELATED ARTICLES  ಕೆನರಾ ಕಾಲೇಜು ಸೊಸೈಟಿ ನೂತನ ಆಡಳಿತ ಮಂಡಳಿ ಅಸ್ಥಿತ್ವಕ್ಕೆ. : ಅಧ್ಯಕ್ಷರಾಗಿ ರಾಮಚಂದ್ರ ರಂಗಪ್ಪ ಕಾಮತ್

ಪ್ರತ್ಯಕ್ಷವಾಗಿ ಎಲ್ಲ ಕಡೆ ನಮ್ಮ ಉಪಸ್ಥಿತಿ ಕಾಣದಿದ್ದರೂ, ಹೆಮ್ಮೆಯ ಕಾರ್ಯಕರ್ತರು, ಪಕ್ಷದ ಸದಸ್ಯರು, ಹಾಗೂ ಪಕ್ಷದ ಪದಾಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರ ಸಹಕಾರದಿಂದ ಜನರ ಸಂಕಷ್ಟಕ್ಕೆ ಪಕ್ಷ ಭೇದ ಮರೆತು ಸ್ಪಂದಿಸುತ್ತಿದ್ದೇವೆ, ಸಹಾಯ ಮಾಡುತ್ತಿದ್ದೇವೆ, ಸದಾ ಸಂಪರ್ಕದಲ್ಲಿ ಇದ್ದೇವೆ, ಮುಂದೆಂದಿಗೂ ಇರುತ್ತೇವೆಂಬ ಸಂದೇಶ ನೀಡಿ ಧೈರ್ಯ ತುಂಬಿದರು.

RELATED ARTICLES  ದಂಡಿ ಚಲನಚಿತ್ರ ಮುಹೂರ್ತ18ಕ್ಕೆ : ಹೊನ್ನಾವರದಲ್ಲಿ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಬಿ.ಜೆ.ಪಿ ಜಿಲ್ಲಾ ಅಧ್ಯಕ್ಷರಾದ ಶ್ರೀ ವೆಂಕಟೇಶ್ ನಾಯಕ, ಜಿಲ್ಲಾ ಬಿ.ಜೆ.ಪಿ ಕೊವಿಡ್ ನಿಯಂತ್ರಣ ತಂಡದ ಅಂಬ್ಯುಲೆನ್ಸ್ ವಿಭಾಗದ ಸೇವಾ ನಿರ್ವಹಣಾ ತಂಡದ ಪ್ರಮುಖರಾದಂತ ಶ್ರೀ ನಾಗರಾಜ ನಾಯಕ ತೊರ್ಕೆಯವರು, ಶ್ರೀ ಮಂಜುನಾಥ ಜನ್ನು ಅವರು, ಶ್ರೀ ನಾಗರಾಜ ಹಿತ್ತಲಮಕ್ಕಿಯವರು, ಶ್ರೀ ಮಹೇಶ್ ಶೆಟ್ಟಿಯವರು, ಶ್ರೀ ಜಗದೀಶ್ ಅಂಬಿಗ, ಶ್ರೀ ಶ್ರೀನಿವಾಸ ನಾಯಕ ಅವರು, ಶ್ರೀಮತಿ ಧನಶ್ರೀ ಅಂಕೋಲೆಕರ, ಶ್ರೀ ರಾಜೇಶ್ ನಾಯಕ, ಶ್ರೀ ನಾಗರಾಜ ತಾಂಡೆಲ, ಶ್ರೀ ಆನಂದ್ ಕವರಿ ಅವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.