ಕಾರವಾರ : ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ಪ್ರಕಾರ ಇಂದು 567 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, 9 ಜನ ಕೊರೋನಾಗೆ ಬಲಿಯಾಗಿದ್ದಾರೆ.

ಜಿಲ್ಲಾಡಳಿತದ ವರದಿ ಪ್ರಕಾರ ಕಾರವಾರದಲ್ಲಿ 48, ಅಂಕೋಲಾದಲ್ಲಿ 7, ಕುಮಟಾದಲ್ಲಿ 126, ಹೊನ್ನಾವರ 67, ಭಟ್ಕಳದಲ್ಲಿ 45, ಶಿರಸಿಯಲ್ಲಿ 102, ಸಿದ್ದಾಪುರದಲ್ಲಿ 45 , ಯಲ್ಲಾಪುರದಲ್ಲಿ 36, ಮುಂಡಗೋಡ 41, ಹಳಿಯಾಳದಲ್ಲಿ 26, ಮತ್ತು ಜೋಯಿಡಾದಲ್ಲಿ 24 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

RELATED ARTICLES  ಕುಮಟಾದಲ್ಲಿ ಜಿಲ್ಲಾಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳಕ್ಕೆ ಚಾಲನೆ: ಗಮನ ಸಳೆದ ವೈವಿದ್ಯಮಯ ಕಾರ್ಯಕ್ರಮಗಳು.

ಕಾರವಾರ 2, ಅಂಕೋಲಾ 2, ಶಿರಸಿ 1, ಸಿದ್ದಾಪುರ 1, ಮುಂಡಗೋಡ 2, ಹಳಿಯಾಳ 1, ಸಾವಾಗಿದ್ದು ಒಟ್ಟು 9 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಒಟ್ಟು 638 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 4522 ಆಗಿದ್ದು, ಅವರಲ್ಲಿ 552 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 3970 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ಕಾರವಾರ 40, ಅಂಕೋಲಾ‌ 30, ಕುಮಟಾ 61, ಹೊನ್ನಾವರ 134, ಭಟ್ಕಳ 46, ಶಿರಸಿ 0, ಸಿದ್ದಾಪುರ 60, ಯಲ್ಲಾಪುರ 30, ಮುಂಡಗೋಡ 49, ಹಳಿಯಾಳ 125, ಜೋಯ್ಡಾ 36 ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 611 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  ಎಲ್ಲಾ ವಿಧಾನ ಸಭಾ ಕ್ಷೇತ್ರಗಳಿಗೂ ಪಕ್ಷಗಳೆಂಬ ತಾರತಮ್ಯ ಮಾಡದೇ ಅನುದಾನವನ್ನು ನೀಡಲಾಗಿದೆ:ಸಿದ್ಧರಾಮಯ್ಯ

ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ ಇದುವೇ ಜನತೆಗೆ ನಮ್ಮ ಕಳಕಳಿಯ ಮನವಿ.