ಯಲ್ಲಾಪುರ : ಪಟ್ಟಣದ ಉದ್ಯಮನಗರದಲ್ಲಿರುವ ಸುಮಾರು ಎಂಬತ್ತು ಅಡಿ ಆಳದ ಬಾವಿಯಲ್ಲಿ ಬಿದ್ದವಳನ್ನು ಸ್ಥಳೀಯರ ನೆರವಿನಿಂದ ಯಲ್ಲಾಪುರ ಅಗ್ನಿಶಾಮಕದಳದವರು ಜೀವಂತ ರಕ್ಷಣೆ ಮಾಡಿದ ಘಟನೆ ನಡೆದಿದೆ.

ಪಟ್ಟಣದ ಉದ್ಯಮ ನಗರ ನಿವಾಸಿ ಮಾನಸಿಕ ಅಸ್ವಸ್ಥೆ 32 ವರ್ಷದ ಸುನಂದ ಪಟಗಾರ ಶನಿವಾರ ಬೆಳಿಗ್ಗೆ 4-30 ರ ಸುಮಾರು ಬಾವಿಗೆ ಬಿದ್ದಿದ್ದಳು ಎನ್ನಲಾಗಿದೆ. ಸುಮಾರು ಎರಡು ತಾಸಿಗೂ ಹೆಚ್ವು ಕಾಲ ಬಾವಿಯಲ್ಲೇ ಚೀರಾಡಿದ್ದಾಳೆ. ಈ ವೇಳೆ ಮನೆಯಲ್ಲಿ ಈಕೆ ಇರದುದ್ದನ್ನು ಗಮನಿಸಿ ಹೊರಬಂದು ನೋಡಿದಾಗ ,ಈಕೆ ಚೀರಾಡುವ ಧ್ವನಿ ಮನೆಯ ಜನರಿಗೆ ಕೇಳಿಸಿದೆ. ತಕ್ಷಣ ಬಾವಿ ಇಣುಕಿ ನೋಡಿದಾಗ ಈಕೆ ಬಾವಿಯಲ್ಲಿ ಬಿದ್ದಿರುವು ಗಮನಕ್ಕೆ ಬಂದಿದೆ.

RELATED ARTICLES  ಕೋಟಿಗಟ್ಟಲೇ ವಂಚನೆ: ಜಿಎಸ್ ಟಿ ಕಾಯ್ದೆ ಮೊದಲ ಆರೋಪಿ ಬಂಧನ!

ಕೂಡಲೇ ಸ್ಥಳೀಯರು ಎಂಬತ್ತು ಅಡಿ ಆಳದ ಬಾವಿಗೆ ಹಗ್ಗವನ್ನು ಬಿಟ್ಟು ಆಕೆಗೆ ಗಟ್ಟಿಯಾಗಿ ಹಿಡಿದುಕೊಳ್ಳಲು ತಿಳಿಸಿದ್ದರು. ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು , ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ತಕ್ಷಣದಲ್ಲಿ ಕಾರ್ಯಾಚರಣೆ ನಡೆಸಿ ಬಾವಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ನೀರಿನಿಂದ ಹೊರಕ್ಕೆ ಕರೆತಂದಿದ್ದಾರೆ.

RELATED ARTICLES  ಟಿಟಿಡಿ ಟ್ರಸ್ಟ್ ಸಮಾಜದ ಇತರ ಸಂಸ್ಥೆಗಳಿಗೂ ಮಾದರಿ: ರಾಘವೇಶ್ವರ ಶ್ರೀ

ಕಾರ್ಯಾಚರಣೆಯಲ್ಲಿ ಯಲ್ಲಾಪುರ ಅಗ್ನಿಶಾಮಕ ಠಾಣೆಯ ಪ್ರಭಾರ ಠಾಣಾಧಿಕಾರಿ .ಭೀಮರಾವ್ ವಾಯು ಉಪ್ಪಾರ್, ಸಿಬ್ಬಂದಿಗಳಾದ ಹನುಮಂತನಾಯ್ಕ ,ಉಲ್ಲಾಸ್ ವೈ ನಾಗೇಕರ್, ನಾಗೇಶ್ ದೇವಾಡಿಗ,ಪ್ರಶಾಂತ್ ಬಾರ್ಕಿ ,ಲಗುಮಣ್ಣ ಎಂಬುವವರು ಭಾಗವಹಿಸಿ ರಕ್ಷಣೆ ಮಾಡಿದ್ದಾರೆ.

ಘಟನೆಯಿಂದಾಗಿ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಸ್ಥಳೀಯರ ಸಮಯಪ್ರಜ್ಞೆಯಿಂದ ಹಾಗೂ ಉತ್ತಮ ಕಾರ್ಯಾಚರಣೆಯಿಂದ ಒಂದು ಪ್ರಾಣ ಉಳಿದಂತಾಗಿದೆ