ಭಟ್ಕಳ: ತಾಲ್ಲೂಕಿನ ನೂಜ ಗ್ರಾಮದ ಹೆರಬುಡಕಿ ಬಳಿ ಬೈಕೊಂದು ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಗಾಯಗೊಂಡ ಬೈಕ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವರದಿಯಾಗಿದೆ.
ಬೈಕ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬಿದ್ದ ಪರಿಣಾಮ ಶಾರದಹೊಳೆ ಬೆಂಗ್ರೆ ನಿವಾಸಿ ರವೀಂದ್ರ ವೆಂಕಟೇಶ ವೈದ್ಯ(೫೯) ಸಾವನ್ನಪ್ಪಿದ್ದಾರೆ. ಇವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.
ಸುರಿಯುತ್ತಿದ್ದ ಮಳೆಯಲ್ಲಿ ಬೈಕ ಚಲಾಯಿಸಿಕೊಂಡು ಹೋಗುವಾಗ ರಸ್ತೆಯಲ್ಲಿ ಬಿದ್ದಿದ್ದ ಮರದ ಕೊಂಬೆಗೆ ಡಿಕ್ಕಿ ಹೊಡೆದು ಬೈಕ ನಿಯಂತ್ರಣ ತಪ್ಪಿ ಬಿದ್ದಿದೆ ಎನ್ನಲಾಗಿದೆ.
ಬೈಕ್ ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಅಗತ್ಯ ಕಾರ್ಯಾಚರಣೆ ಕೈಗೊಂಡರಾದರೂ ಸವಾರ ಬದುಕುಳಿಯಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.