ಕುಮಟಾ : ಉತ್ತರ ಕನ್ನಡ ಜಿಲ್ಲಾ ಬಿ.ಜೆ.ಪಿ ಪಕ್ಷದ ವತಿಯಿಂದ ಕೊರೊನಾ ಅಲೆಯಿಂದ ಸಂಕಷ್ಟಕ್ಕಿಡಾದ ಕುಟುಂಬಗಳಿಗೆ ಪುಡ್ ಕಿಟ್ ವಿತರಣೆ ಕಾರ್ಯ ಮುಂದುವರೆದಿದೆ.
ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರ ಶ್ರೀ ದಿನಕರ ಶೆಟ್ಟಿಯವರ ಸಹಾಯ ಹಾಗೂ ಮಾರ್ಗದರ್ಶನದಲ್ಲಿ ಉತ್ತರ ಕನ್ನಡ ಜಿಲ್ಲಾ ಬಿ.ಜೆ.ಪಿ ಪಕ್ಷದ ವತಿಯಿಂದ ಕೊರೊನಾ ಅಲೆಯಿಂದ ಸಂಕಷ್ಟಕ್ಕೀಡಾದ ತೊರ್ಕೆ ಗ್ರಾಮ ಪಂಚಾಯತ್ ನ ಹೊಸಕಟ್ಟಾ ಊರಿನ 200 ಕುಟುಂಬಗಳಿಗೆ ಇಂದು ಪುಡ್ ಕಿಟ್ ಅನ್ನು ವಿತರಿಸಲಾಯಿತು.
ಫುಡ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲಾ ಬಿ.ಜೆ.ಪಿ ಕೊವಿಡ್ ನಿಯಂತ್ರಣ ತಂಡದ ಅಂಬ್ಯುಲೆನ್ಸ್ ವಿಭಾಗದ ಸೇವಾ ನಿರ್ವಹಣಾ ತಂಡದ ಪ್ರಮುಖರಾದಂತ ಶ್ರೀ ನಾಗರಾಜ ನಾಯಕ ತೊರ್ಕೆ ಭಾಗವಹಿಸಿದರುಮ
ಇವರ ಜೊತೆಗೆ ಶ್ರೀ ಮಹೇಶ್ ಶೆಟ್ಟಿಯವರು, ತೊರ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದಂತ ಶ್ರೀ ಆನಂದು ಕವರಿಯವರು, ನಾಡು ಮಾಸ್ಕೇರಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ರಾಜೇಶ್ ನಾಯಕ, ಶ್ರೀ ಗಣೇಶ ಪಂಡಿತ್, ಶ್ರೀ ದಯಾ ನಾಯ್ಕ, ಶ್ರೀ ವೆಂಕಟರಮಣ ಕವರಿ, ಶ್ರೀ ರಾಮಾ ಕವರಿ, ಶ್ರೀ ನಾಗರಾಜ ಹರಿಕಾಂತ, ಶ್ರೀ ಸಾಧು ಹರಿಕಾಂತ ಅವರು ಉಪಸ್ಥಿತರಿದ್ದರು.