ಭಟ್ಕಳ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿಯ ವತಿಯಿಂದ ಭಟ್ಕಳ ತಾಲೂಕಾ ಆಸ್ಪತ್ರೆಗೆ
ಕೊವೆಡ್ ಸಂಬAಧಿತ ಹಾಗೂ ಇತರೆ ಪ್ರಮುಖ ಔಷಧಿಯನ್ನು ದೇಣಿಗೆಯಾಗಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತರಿಗೆ ಸಮಿತಿಯ ಪದಾಧಿಕಾರಿಗಳು ಕೊವೆಡ್ ಮುಂಜಾಗೃತೆಯೊAದಿಗೆ ನೀಡಿದರು.
ಗೌರವಾಧ್ಯಕ್ಷರಾದ ನರೇಂದ್ರ ನಾಯಕ ಮಾತನಾಡಿ ಸಮಾಜ ಬಾಂಧವರ ಹಾಗೂ ಧಾನಿಗಳ ಸಹಕಾರದೊಂದಿಗೆ ಸಮಿತಿಯು ಈ ಕಾರ್ಯವನ್ನು ಮಾಡುತ್ತಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಡಾ. ಸವಿತಾ ಕಾಮತ ಹಾಗೂ ತಂಡವು ಹಗಲಿರುಳು ಶ್ರಮಿಸಿ ಈ ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯವು ಸರ್ವರಿಗೂ ಲಭಿಸುವಂತಾಗಿಸಿದ್ದಾರೆ. ಇವರೆಲ್ಲರೂ ಅಭಿನಂದನಾರ್ಹರು ಎಂದು ಹೇಳಿದರು.
ಅಧ್ಯಕ್ಷರಾದ ಕಲ್ಪೇಶ ಪೈ ಸರ್ಕಾರದೊಂದಿಗೆ ಸಂಘ ಸಂಸ್ಥೆಗಳು ಕೈ ಜೋಡಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುವುದು. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಯತ್ನವನ್ನು ಮಾಡುವೆವು. ನಮ್ಮ ಆಸ್ಪತ್ರೆ ನಮ್ಮ ಹೆಮ್ಮೆ ಎಂದರು.
ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ನಾಗೇಶ ಪೈ, ಕಾರ್ಯದರ್ಶಿ ಶ್ರೀನಾಥ ಪೈ, ಸಮಿತಿ ಸದಸ್ಯರು ಉಪಸ್ಥಿತರಿದ್ದರು.