ಸಂತೋಷ್ ಪೂಜಾರಿ ಪಾಂಡವರ ಕಲ್ಲು
೭೮೯೯೫೩೦೩೪೨
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಪಾಂಡವರ ಕಲ್ಲಿನ ಪುಣ್ಯದ ಮಣ್ಣಲ್ಲಿ ನೆಲೆ ನಿಂತವರೆ ಕೋಟಿ-ಚೆನ್ನಯರು.
ಪಾಂಡವರ ಕಲ್ಲು ಎಂಬ ಹಳ್ಳಿಯ ಮಧ್ಯಭಾಗದಲ್ಲಿ ಕೋಟಿ-ಚೆನ್ನಯ ಬ್ರಹ್ಮ ಬೈದರ್ಕಳ ವಿಶಾಲವಾದ ಗರಡಿ ಇದೆ.ಸುತ್ತಲೂ ಕಂಗೊಳಿಸುವ ದೇವಸ್ಥಾನಗಳು ಎಡಕ್ಕೆ ಶ್ರೀ ಮಹಾದೆವ ದೆವೆಶ್ವರ ದೇವಸ್ಥಾನ,ಶ್ರೀ ಮಹಮ್ಮಾಯಿ ಕ್ಷೇತ್ರ ಕುರುವರಗೊಳಿ,ಬಲಕ್ಕೆ ಶ್ರೀ ಮಹಿಷಮರ್ಧಿನಿ ಅಮ್ಮನವರ ಕ್ಷೇತ್ರ ಪಾರೆಂಕಿ,ಉಧ್ಭವ ರೌಧ್ರನಾಥೆಶ್ವರ ದೇವಸ್ಥಾನ ನಡುಬೆಟ್ಟು ಇವೆಲ್ಲದರ ಮಧ್ಯೆ ಇರುವುದೆ ಕೋಟಿ ಚೆನ್ನಯ ಬ್ರಹ್ಮ ಬೈದೆರೆ ಗರೊಡಿ.ಇಲ್ಲಿ ವರ್ಷಕ್ಕೆ ಒಂದು ಭಾರಿ ಜಾತ್ರ ಮಹೋತ್ಸವ ನಡೆಯುತ್ತದೆ.ಸುಮಾರು ೬ ದಿನಗಳ ಕಾಲ ನಡೆಯುವ ಜಾತ್ರ ಮಹೋತ್ಸವದ ಕೊನೆಯ ದಿನ ಭಕ್ತರ ಜನಸಾಗರವೆ ಹರಿದು ಬರುತ್ತದೆ. ಜಾತಿ ಧರ್ಮದ ಬೇಧವಿಲ್ಲದೆ ಸರ್ವಧರ್ಮಿಯರು ಈ ಜಾತ್ರ ಮಹೋತ್ಸವದಲ್ಲಿ ಭಾಗವಹಿಸುತ್ತಾರೆ.ದೀಪಗಳ ಹಬ್ಬವಾದ ದೀಪಾವಳಿಯಂದು ರಾತ್ರಿ ಇಡೀ ಗರಡಿ ದೀಪಗಳಿಂದ ಕಂಗೊಳಿಸುತ್ತದೆ.ಹಿಂದು ಭಾಂದವರು ದೀಪಾವಳಿಯಂದು ಗರಡಿಗೆ ಆಗಮಿಸಿ ಭಕ್ತಿಯಿಂದ ಇಡೀ ಗರಡಿಯನ್ನು ದೀಪಗಳನ್ನು ಹೊತ್ತಿಸಿ ಅಲಂಕರಿಸುತ್ತಾರೆ.ನಂತರ ಪಟಾಕಿಯನ್ನು ಸಿಡಿಸಿ ದೀಪಾವಳಿ ಸಂಭ್ರಮವನ್ನು ಗರಡಿಯಲ್ಲಿ ಆಚರಿಸುತ್ತಾರೆ.
ಸ್ಥಳ ಪುರಾಣ
ಇಲ್ಲಿಗೆ ಪಾಂಡವರ ಕಲ್ಲು ಎಂಬ ಹೆಸರು ಬರಲು ಪ್ರತೀತಿಗಳಿವೆ.ಮಹಾಭಾರತದ ಪಾಂಡವರು ವನವಾಸದಲ್ಲಿ ಇದ್ದ ಸಂದರ್ಭದಲ್ಲಿ ಅವರು ಇಲ್ಲಿ ಬಂದು ಕೂಡಾ ನೆಲೆಸಿದ್ದರು ಎಂಬುದಕ್ಕೆ ಸಾಕ್ಷಿಗಳಿವೆ.ಪಾಂಡವರು ಇಲ್ಲಿ ರೊಟ್ಟಿ ಮಾಡಲು ಬಳಸುತ್ತಿದ ಬೃಹದಾಕಾರದ ಕಲ್ಲುಗಳು, ಮಲಗುವ ಕಲ್ಲುಗಳು, ಸ್ನಾನಕ್ಕೆ ಉಪಯೋಗಿಸುತ್ತಿದ್ದ ಕೊಳಗಳು ಇಲ್ಲಿವೆ.ಈ ಕೊಳದಲ್ಲಿ ವರ್ಷದ ಪೂರ್ತಿ ನೀರು ತುಂಬಿ ತುಳುಕುತ್ತದೆ.ನೀರು ಬತ್ತಿಹೊಗುವುದಿಲ್ಲ ಎಂಬುದು ವಿಶೇಷ.
ಈ ಕೋಟಿ ಚೆನ್ನಯರ ಪುಣ್ಯದ ಮಣ್ಣಿಗೆ ಒಮ್ಮೆ ಬನ್ನಿ ಭಕ್ತಬಂಧುಗಳೆ.