ಹೊನ್ನಾವರ : ಗೋವುಗಳಿಗೆ ಅಪಘಾತವಾದಾಗ ಹಾಗೂ ಗೋವುಗಳು ಸಂಕಷ್ಟದ ಸಂದರ್ಭದಲ್ಲಿ ಇದ್ದಾಗ ಅವುಗಳ ಕಾರ್ಯಗಳ ಮೂಲಕವೇ ತನ್ನ ಸೇವೆ ಸಲ್ಲಿಸುತ್ತಿರುವ ಗೋ ರಕ್ಷಣಾ ವೇದಿಕೆ (ರಿ.) ಹೊನ್ನಾವರದ ಸದಸ್ಯರು ತಮ್ಮ ಸೇವೆ ಮುಂದುವರೆಸಿದ್ದಾರೆ.

ತಾಲೂಕಿನ ದಿಬ್ಬಣಗಲ್ ನ ಹೊಸ್ಮಠದ ಹತ್ತಿರ ಇಂದು ಬೆಳಿಗ್ಗೆ ಒಂದು ಗೋವು ಯಾವುದೋ ಒಂದು ಅಪರಿಚಿತ ವಾಹನಕ್ಕೆ ಅಪಘಾತವಾಗಿ ಒಂದು ಕಾಲು ಮುರಿದು ರಸ್ತೆಯ ಪಕ್ಕ ಬಿದ್ದಿತ್ತು.

RELATED ARTICLES  ಸ್ನಾನಕ್ಕೆ ಹೋದಾಗ ವಿದ್ಯುತ್ ಶಾಕ್ ತಗುಲಿ ಸಾವು.

ಅಪಘಾತದ ರಭಸಕ್ಕೆ ಪೆಟ್ಟು ಬಿದ್ದು ಗೋವು ಎದ್ದು ಓಡಾಡಲು ಆಗದೇ ಇರುವ ಸ್ಥಿತಿಯಲ್ಲಿರುವುದನ್ನು ಗಮನಿಸಿದ ಗೋ ರಕ್ಷಣಾ ವೇದಿಕೆ (ರಿ.) ಹೊನ್ನಾವರದ ಸದಸ್ಯರು ಖರ್ವಾದ ಪಶು ವೈದ್ಯರಾದ ಕವಿತಾರವರನ್ನು ಕರೆಸಿ ಚಿಕಿತ್ಸೆ ಕೊಡಿಸಿ ಆರೈಕೆ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ಅದೇ ಸಂದರ್ಭದಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಅದರ ಮಾಲೀಕರನ್ನು ಪತ್ತೆ ಹಚ್ಚಲು ಸಾಧ್ಯವಾಗದ ಕಾರಣ ಒಂದು ಸಮತಟ್ಟಾದ ಜಾಗದಲ್ಲಿ ತಾತ್ಕಾಲಿಕ ಶೇಡ್ ರಚನೆ ಮಾಡಿ ಮಳೆಯಿಂದ ಏನು ತೊಂದರೆ ಆಗದೇ ಇರುವ ರೀತಿಯಲ್ಲಿ ವೇದಿಕೆ ವತಿಯಿಂದ ವ್ಯವಸ್ಥೆ ಮಾಡಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ಸೂರ್ಯನನ್ನು ಆರಾಧಿಸುವ ರಥ ಸಪ್ತಮಿ ದಿನ.

ಅಪಘಾತವಾದ ಗೋಮಾತೆಯ ಗುರುತು ಸಿಕ್ಕರೆ ಗೋ ರಕ್ಷಣಾ ವೇದಿಕೆ (ರಿ.) ಹೊನ್ನಾವರದ ಸದಸ್ಯರನ್ನು ಸಂಪರ್ಕಿಸಲು ವಿನಂತಿಸಲಾಗಿದ್ದು, ಗೋವನ್ನು ಮಾಲಕರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಗೋ ರಕ್ಷಣಾ ವೇದಿಕೆ (ರಿ.) ಹೊನ್ನಾವರದ ಸದಸ್ಯರು ಮಾಹಿತಿ ಹಂಚಿಕೊಂಡಿದ್ದಾರೆ.