ನ್ಯೂಸ್ ಡೆಸ್ಕ್ : ಈಗಾಗಲೇ ಕೊರೊನಾ ಮಹಾಮಾರಿಯ ಆರ್ಭಟದಿಂದ ಜನರೆಲ್ಲಾ ನಲುಗಿ ಹೋಗಿದ್ದಾರೆ. ಹೊತ್ತಿನ ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಜನಸಾಮಾನ್ಯರದ್ದು, ಆದರೆ ನಡುವೆ ಸದ್ದಿಲ್ಲದೇ ಪೆಟ್ರೋಲ್​ ಮತ್ತು ಡೀಸೆಲ್​ ದರ ಏರಿಕೆಯತ್ತ ಸಾಗುತ್ತಲೇ ಇದೆ.

ಕೊರೊನಾ ಸಂಕಷ್ಟದ ನಡುವೆಯೂ ಇಂಧನ ದರ ಏರಿಕೆ ಕಂಡು ಗಗನಕ್ಕೇರಿರುವುದು ಜನರಿಗೆ ಗಾಯದ ಮೇಲೆ ಬರೆ ಬಿದ್ದಂತಾಗಿದೆ. ಕರ್ನಾಟಕದ ಜಿಲ್ಲೆಗಳಾದ ಚಿಕ್ಕಮಗಳೂರು, ಬಳ್ಳಾರಿ, ಉತ್ತರಕನ್ನಡದ ಶಿರಸಿ ಸೇರಿ ಮಲೆನಾಡು ಭಾಗಗಳಲ್ಲಿ ಲೀಟರ್​ ಪೆಟ್ರೋಲ್​ ದರ 100ರ ಗಡಿ ದಾಟಿತ್ತು, ಈ ನಡುವೆಯೇ ಸರ್ಕಾರ ಮತ್ತೊಂದು ಶಾಕ್ ನೀಡಿದ್ದು ವಿದ್ಯುಚ್ಛಕ್ತಿ ಸರಬರಾಜು ದರದಲ್ಲಿ ಶೇಕಡ 3.84 ರಷ್ಟು ಹೆಚ್ಚಳ ಮಾಡಲಾಗಿದೆ. ಪ್ರತಿ ಯೂನಿಟ್ ಗೆ 1 ರೂಪಾಯಿ 35 ಪೈಸೆ ಹೆಚ್ಚಳಕ್ಕೆ ಕಂಪನಿಗಳು ಪ್ರಸ್ತಾವನೆ ಸಲ್ಲಿಸಿದ್ದು, 30 ಪೈಸೆ ದರ ಹೆಚ್ಚಳಕ್ಕೆ ಸರ್ಕಾರ ಅನುಮತಿ ನೀಡಿದೆ.

RELATED ARTICLES  ಲಯನ್ಸ್ ಕ್ಲಬ್ ಕುಮಟಾ ವತಿಯಿಂದ ಕೊರೋನಾ ಜಾಗೃತಿ ಕಾರ್ಯಕ್ರಮ

ಮಧ್ಯಮವರ್ಗದವರು ಹಾಗೂ ಬಡತನ ರೇಖೆ ಯಲ್ಲಿರುವ ಜನಸಾಮಾನ್ಯರ ಮೇಲೆ ಇದು ಹೆಚ್ಚಿನ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ.

ಗ್ಯಾಸ್ ಸಿಲಿಂಡರ್ ಬೆಲೆ, ಅಡುಗೆ ಎಣ್ಣೆ ಬೆಲೆ, ತೈಲ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನರಿಗೆ ಇದು ಮತ್ತೊಂದು ಆಘಾತವಾಗಿದೆ.

RELATED ARTICLES  ಹೆಗಡೆ ಗ್ರಾಮದಲ್ಲಿ ಉಜ್ವಲ ಯೋಜನೆಯ ಸೌಲಭ್ಯ ಪಡೆದ 9 ಫಲಾನುಭವಿಗಳು

ಕೋವಿಡ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದು ದಿನನಿತ್ಯ ದುಡಿದು ಜೀವನ ಸಾಗಿಸುತ್ತಿರುವ ಸಾಮಾನ್ಯ ಜನರು ಕಂಗೆಟ್ಟಿದ್ದಾರೆ. ದುಡಿಯಲು ಕೆಲಸವಿಲ್ಲದೆ ಸಂಬಳವನ್ನೇ ಅವಲಂಬಿಸಿರುವ ಅದೆಷ್ಟೋ ಜನ ಬೀದಿಗೆ ಬರುವ ಆತಂಕದಲ್ಲಿದ್ದಾರೆ. ಇದೆಲ್ಲದರ ನಡುವೆ ಜನತೆಗೆ ಈ ಬೆಲೆ ಹೆಚ್ಚಳದ ಸುದ್ದಿ ಗೊಂದಲವನ್ನು ಉಂಟುಮಾಡಿದೆ.

ಸುದ್ದಿ ಮೂಲ : ಕನ್ನಡ ದೈನಿಕ