ಕಾರವಾರ : ಮುಂಗಾರು ಆರಂಭವಾಗಿದ್ದು ಮಳೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಸಾಮಾನ್ಯವಾದಂತಿದೆ. ಅದರಲ್ಲೂ ಹೊನ್ನಾವರ ತಾಲೂಕಿನ ಬಡಗಣಿ, ಭಾಸ್ಕೇರಿ ಹಾಗೂ ಗುಂಡುಬಾಳ ನದಿಗಳಲ್ಲಿ ಪ್ರತಿ ವರ್ಷ ಪ್ರವಾಹ ಕಾಣಿಸಿಕೊಳ್ಳುತ್ತಿದೆ. ಲಿಂಗನಮಕ್ಕಿ ಆಣೆಕಟ್ಟಿನ ಅಚ್ಚಕಟ್ಟು ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿ ಅಣೆಕಟ್ಟು ಭರ್ತಿಯಾದಲ್ಲಿ ಶರಾವತಿ ನದಿಯಲ್ಲೂ ಕೂಡಾ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಪ್ರವಾಹ ಬಂದ ನಂತರದ ಪರಿಹಾರ ಕಾರ್ಯಗಳಿಗಿಂತ ಪ್ರವಾಹ ಪರಿಸ್ಥಿತಿಗಿಂತ ಮೊದಲಿನ ಮುನ್ನೆಚ್ಚರಿಕಾ ಕ್ರಮಗಳು ಉತ್ತಮ ಎಂಬಂತೆ ಇಂದು ಹೊನ್ನಾವರ ತಾಲೂಕಿನ ಬಡಗಣಿ, ಭಾಸ್ಕೇರಿ, ಗುಂಡುಬಾಳ ಹಾಗೂ ಶರಾವತಿ ನದಿಗಳ ಪ್ರವಾಹದಿಂದ ಬಾಧಿತವಾಗುವ ಗ್ರಾಮಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.

RELATED ARTICLES  ಶಾಲೆ ಗೋಡೆ ಕುಸಿತ : ತಪ್ಪಿದ ಭಾರೀ ಅನಾಹುತ

ಪ್ರವಾಹದಿಂದ ಜನರು ಅನುಭವಿಸುವ ಸಂಕಟ ಹಾಗೂ ಇದಕ್ಕೆ ಶಾಶ್ವತ ಪರಿಹಾರಗಳ ಕುರಿತಂತೆ ಸ್ಥಳಿಯರಿಂದಲೇ ಮಾಹಿತಿ ಹಾಗೂ ಸಲಹೆಗಳನ್ನು ಪಡೆಯಲಾಯಿತು. ಅಲ್ಲದೇ ಸ್ಥಳೀಯ ಮಾಧ್ಯಮದವರಿಂದಲೂ ಕೂಡಾ ಸಲಹೆಗಳನ್ನು ಪಡೆಯಲಾಯಿತು.

RELATED ARTICLES  ಕುಮಟಾದ ಮಿರ್ಜಾನ್ ನಲ್ಲಿಯೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ‌ ನಿರ್ಮಾಣ : ಆರೋಗ್ಯ ಸಚಿವರ ಹೇಳಿಕೆ.

ನಂತರ ಭಟ್ಕಳ ಸಹಾಯಕ ಕಮೀಷನರ್ ಕಛೇರಿಯಲ್ಲಿ ಪ್ರವಾಹ ಮುನ್ನೆಚ್ಚರಿಕೆ ಹಾಗೂ ಶಾಶ್ವತ ಪರಿಹಾರ ಕಾರ್ಯಗಳ ಕುರಿತಂತೆ ಮಾನ್ಯ ಶಾಸಕರಾದ ಶ್ರೀ ಸುನೀಲ್ ನಾಯ್ಕ, ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ ಜಿಲ್ಲಾಧಿಕಾರಿಗಳು ಪ್ರವಾಹದ ಕುರಿತಾದ ಮುನ್ನೆಚ್ಚರಿಕಾ ಕಾರ್ಯಕ್ಕೆ ಸೂಚನೆ ನೀಡಿದರು.