ಕಾರವಾರ : ಇಂದು ಉತ್ತರಕನ್ನಡ ಜಿಲ್ಲೆಯಲ್ಲಿ 309 ಜನರಲ್ಲಿ ಪಾಸಿಟಿವ್ ವರದಿಯಾಗಿದೆ. 2 ಜನ ಕರೋನಾಕ್ಕೆ ಬಲಿಯಾದ ಬಗ್ಗೆ ವರದಿಯಾಗಿದೆ.

ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ಪ್ರಕಾರ ಇಂದು 309 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, 2 ಜನ ಕೊರೋನಾಗೆ ಬಲಿಯಾಗಿದ್ದಾರೆ.

ಜಿಲ್ಲಾಡಳಿತದ ವರದಿ ಪ್ರಕಾರ ಕಾರವಾರದಲ್ಲಿ 18 ಅಂಕೋಲಾದಲ್ಲಿ 21, ಕುಮಟಾದಲ್ಲಿ 63, ಹೊನ್ನಾವರ 57, ಭಟ್ಕಳದಲ್ಲಿ 17, ಶಿರಸಿಯಲ್ಲಿ 39, ಸಿದ್ದಾಪುರದಲ್ಲಿ 10, ಯಲ್ಲಾಪುರದಲ್ಲಿ 17, ಮುಂಡಗೋಡ 21, ಹಳಿಯಾಳದಲ್ಲಿ 36, ಮತ್ತು ಜೋಯಿಡಾದಲ್ಲಿ 10 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

RELATED ARTICLES  ಈ ದಿನ ಕೆಲ ರಾಶಿಯವರಿಗೆ ಅತ್ಯಂತ ಶುಭ ದಿನ! ಕೆಲವರಿಗೆ ಇದೆ ಕಿರಿ ಕಿರಿ! ನಿಮ್ಮ ರಾಶಿಯ ಮೇಲಿದೆ ದಿನದ ಭವಿಷ್ಯ!

ಭಟ್ಕಳದಲ್ಲಿ ಒಂದು ಹಾಗೂ ಹೊನ್ನವರದಲ್ಲಿ ಒಂದು ಸಾವು ಸಂಭವಿಸಿದೆ. ಒಟ್ಟು 2 ಸಾವು ಸಂಭವಿಸಿದೆ.

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 3002 ಆಗಿದ್ದು, ಅವರಲ್ಲಿ 340 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 2662 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ಕಾರವಾರ 66, ಅಂಕೋಲಾ‌ 14, ಕುಮಟಾ 54, ಹೊನ್ನಾವರ 41, ಭಟ್ಕಳ 50, ಶಿರಸಿ 49, ಸಿದ್ದಾಪುರ 77, ಯಲ್ಲಾಪುರ 0, ಮುಂಡಗೋಡ 0, ಹಳಿಯಾಳ 71, ಜೋಯ್ಡಾ 0 ಜನರು ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 422 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  ಪ್ರಯಾಣದಲ್ಲಿ ವಾಂತಿ ಸಮಸ್ಯೆ : ಇಲ್ಲಿದೆ ಸರಳ ಪರಿಹಾರಗಳು

ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ ಇದುವೇ ಜನತೆಗೆ ನಮ್ಮ ಕಳಕಳಿಯ ಮನವಿ.