ಕುಮಟಾ : ಸೆಲ್ಫಿ ಹುಚ್ಚು ಅನೇಕ ಜನರಿಗೆ ಕಂಟಕವಾಗಿ ಪರಿಣಮಿಸಿದ ಬಗ್ಗೆ ಆಗಾಗ ವರದಿಯಾಗುತ್ತಿದೆ. ಇಂದು ಕುಮಟಾ ಬೀಚ್ ನಲ್ಲಿ ಸೆಲ್ಪಿ ತೆಗೆಯಲು ಹೊಗಿ ಕಾಲು ಜಾರಿ ಬಿದ್ದು ಯುವಕ ನೀರಿನಲ್ಲಿ ಕಣ್ಮರೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡುತ್ತಿದೆ.

ಪಟ್ಟಣದ ಹೆಡ್ ಬಂದರ್‌ನ ಸಮುದ್ರಕ್ಕೆ ಹೊಂದಿಕೊoಡಿರುವ ಬಂಡೆಗಲ್ಲಿನ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದ ಯುವಕನೋರ್ವ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ಸಮುದ್ರ ಪಾಲಾಗಿದ್ದಾನೆ ಎಂದು ವರದಿಯಾಗಿದೆ.

ಕುಮಟಾ ಪಟ್ಟಣದ ಹೆಡ್ ಬಂದರ್‌ನ ಸಮುದ್ರ ತೀರಕ್ಕೆ ಸ್ಕೂಟರ್‌ನಲ್ಲಿ (ಕೆಎ-03 ಎಚ್.ಎಲ್-6353) ಬಂದ ಯುವಕನೋರ್ವ ಸಮುದ್ರಕ್ಕೆ ಹೊಂದಿಕೊoಡಿರುವ ಬಂಡೆಗಲ್ಲಿನ ಮೇಲೆ ನಿಂತು ಮೊಬೈಲ್‌ನಲ್ಲಿ ಸೆಲ್ಫಿ ತೆಗೆಯುತ್ತಿದ್ದ. ಈ ಸಂದರ್ಭದಲ್ಲಿ ಕಾಲು ಜಾರಿದ ಪರಿಣಾಮ ಯುವಕ ಸಮುದ್ರ ಪಾಲಾಗಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕುಮಟಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

RELATED ARTICLES  ಪಂಚ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ : 3 ರಾಜ್ಯದಲ್ಲಿ ಕಾಂಗ್ರೆಸ್ ಗೆ ಮುನ್ನಡೆ – ಬಿಜೆಪಿಗೆ ಹಿನ್ನಡೆ..!

ಸ್ಥಳಕ್ಕೆ ಧಾವಿಸಿದ ಪಿಎಸ್‌ಐ ರವಿ ಗುಡ್ಡಿ ನೇತೃತ್ವದ ತಂಡ ಸ್ಥಳೀಯರ ಸಹಕಾರದಲ್ಲಿ ಸಮುದ್ರದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಆದರೆ ಸಮುದ್ರ ಪಾಲಾದ ಯುವಕ ಈತನಕ ಪತ್ತೆಯಾಗಿಲ್ಲ. ಅಗ್ನಿ ಶಾಮಕ ಮತ್ತು ಕರಾವಳಿ ಪಡೆಯ ಸಿಬ್ಬಂದಿಯು ಶೋಧ ಕಾರ್ಯ ಮುಂದುವರೆಸಿದ್ದಾರೆ.

RELATED ARTICLES  11 ದಿನ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭಾನುವಾರ ವೈಭವದ ತೆರೆ.

ಯುವಕನ ಸ್ಕೂಟರ್‌ನ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿದಾಗ, ಈ ಸ್ಕೂಟರ್ ಬೆಂಗಳೂರಿನ ಯುವತಿಯ ಹೆಸರಿನಲ್ಲಿರುವುದು ಕಂಡುಬoದಿದೆ. ಈ ಬಗ್ಗೆ ಪ್ರಕರಣ ದಾಖಲಿಸಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸೆಲ್ಫಿ ತೆಗೆಯಲು ಹೋದ ಯುವಕ ನೀರಿನಲ್ಲಿ ಬಿದ್ದಿದ್ದಾನೆಯೋ ಅಥವಾ ಇನ್ಯಾವುದೋ ಕಾರಣದಿಂದ ಬೇರೆ ರೀತಿಯ ಘಟನೆ ಸಂಭವಿಸಿದೆಯೋ ಎನ್ನುವುದು ತನಿಖೆ ನಂತರದಲ್ಲಿ ಸಂಪೂರ್ಣವಾಗಿ ತಿಳಿದುಬರಬೇಕಿದೆ.