ಭಟ್ಕಳ : ಪಾಕಿಸ್ತಾನದಿಂದ ಬಂದು ಅಕ್ರಮವಾಗಿ ಭಟ್ಕಳದಲ್ಲಿ ಕಳೆದ 8 ವರುಷಗಳಿಂದ ನೆಲೆಸಿದ್ದ ಮಹಿಳೆಯನ್ನು ಭಟ್ಕಳ ಪೋಲಿಸ್ ಇಲಾಖೆ ಬಂದಿಸಿದೆ.
ಈ ಮಹಿಳೆ ಅಕ್ರಮವಾಗಿ ಭಟ್ಕಳದಲ್ಲಿ ನೆಲೆಸುವ ಸಲುವಾಗಿ ದಾಖಲೆಗಳನ್ನು ಸೃಷ್ಟಿಸಲು ಸಹಕರಿಸಿದ ಸರಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯಾರೆಂಬುದು ಮುಖ್ಯವಾಗಿ ತನಿಖೆ ಮಾಡಿ , ನಕಲಿ ದಾಖಲೆ ತಯಾರಿಸಿ ಪಾಕಿಸ್ಥಾನಿ ಮಹಿಳೆಗೆ ಜನ್ಮ ದಾಖಲೆ ಪ್ರಮಾಣ ಪತ್ರ , ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಪಡೆಯಲು ಸಹಕರಿಸಿದ ಭ್ರಷ್ಟ ಸರಕಾರಿ ಅಧಿಕಾರಿಗಳನ್ನು ಪತ್ತೆ ಮಾಡಿ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು ಎಂದು ಅನೇಕ ಪ್ರಮುಖರಿಂದ ಒತ್ತಡ ಕೇಳಿಬಂದಿದೆ. ಜನ ಸಾಮಾನ್ಯರೂ ಆ ಬಗ್ಗೆ ಆಕ್ರೋಶ ಹೊರ ಹಾಕಿದ್ದು, ಇಂತಹ ಘಟನೆಗೆ ಕಾರಣರು ಆ ದಾಖಲೆ ಮಾಡಲು ಸಹಕರಿಸಿದವರು ಎಂಬುದಾಗಿ ಸಾಮಾಜಿಕವಾಗಿ ಮಾತುಗಳು ಕೇಳಿಬರುತ್ತಿದೆ.
ಪೋಲಿಸ್ ಇಲಾಖೆಗೆ ನಮ್ಮ ಸಂಪೂರ್ಣ ಸಹಕಾರವಿದ್ದು ತಪ್ಪಿತಸ್ಥರು ಯಾರೇ ಆದರೂ ಇಂತಹ ದೇಶ ವಿರೋಧಿ ಚಟುವಟಿಕೆಗೆ ತಕ್ಕ ಶಿಕ್ಷೆ ಆಗಬೇಕು ಎಂದು ಜನರು ಹೇಳಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಶಾಸಕರೂ ಅದೇ ವಿಧದಲ್ಲಿ ಸಾಮಾಜಿಕ ಜಾಲತಾದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಈ ಕೃತ್ಯದಲ್ಲಿ ತೊಡಗಿದವರ ಮೈ ಬೆವರುವಂತೆ ಮಾಡಿದೆ.
ಪಾಕಿಸ್ತಾನದಿಂದ ಬಂದು ಅಕ್ರಮವಾಗಿ ಭಟ್ಕಳದಲ್ಲಿ ನೆಲೆಸಿದ್ದ ಮಹಿಳೆಯನ್ನು ನಮ್ಮ ಪೋಲಿಸ್ ಇಲಾಖೆ ಬಂದಿಸಿದೆ. ಈ ಮಹಿಳೆ ಅಕ್ರಮವಾಗಿ ಭಟ್ಕಳದಲ್ಲಿ ನೆಲೆಸುವ ಸಲುವಾಗಿ ದಾಖಲೆಗಳನ್ನು ಸೃಷ್ಟಿಸಲು ಸಹಕರಿಸಿದವರು ಯಾರೆಂಬುದು ಮುಖ್ಯವಾಗಿ ತನಿಖೆ ನಡೆಸುವಂತೆ ಪೋಲಿಸ್ ಇಲಾಖೆಗೆ ಸೂಚಿಸಲಾಗಿದೆ. ಪೋಲಿಸ್ ಇಲಾಖೆಗೆ ನಮ್ಮ ಸಂಪೂರ್ಣ ಸಹಕಾರವಿದೆ. ತಪ್ಪಿತಸ್ಥರು ಯಾರೇ ಆದರೂ ಇಂತಹ ದೇಶ ವಿರೋಧಿ ಚಟುವಟಿಕೆಗೆ ತಕ್ಕ ಶಿಕ್ಷೆ ಕಾನೂನಿನ ವ್ಯವಸ್ಥೆಯಲ್ಲಿ ನೀಡಲಾಗುವುದು ಎಂದು ಶಾಸಕ ಸುನೀಲ್ ನಾಯ್ಕ ಹೇಳಿದ್ದಾರೆ. ಈ ಬಗ್ಗೆ ಮುಂದಿನ ಕಾರ್ಯಾಚರಣೆ ಬಗ್ಗೆ ಕುತೂಹಲ ಮೂಡಿಸಿದೆ.