ಹೊನ್ನಾವರ : ತಾಲೂಕಿನ ಕವಲಕ್ಕಿಯಲ್ಲಿ ಚಿನ್ನದ ಅಂಗಡಿ ಹೊಂದಿದ್ದು ಚಿನ್ನದ ವ್ಯಾಪಾರದಲ್ಲಿ ತೊಡಗಿಕೊಂಡಿದ್ದ ಹಾಗೂ ಜನಸಾಮಾನ್ಯರಿಗೆ ಚಿರಪರಿಚಿತರಾಗಿದ್ದ ಸುಧಾಕರ ಶೇಟ್ ಅಕಾಲಿಕವಾಗಿ ನಿಧನರಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇವರ ಸಾವಿನಿಂದಾಗಿ ಕವಲಕ್ಕಿ ಮತ್ತೆ ಶೋಕದಲ್ಲಿ ಮುಳುಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ತಾಲೂಕಿನ ಕವಲಕ್ಕಿ ಭಾಗದಲ್ಲಿ “ಚಿನ್ನದ ಶೆಟ್ರು” ಎಂದೇ ಇವರು ಹೆಸರಾಗಿದ್ದವರಾಗಿದ್ದು, ಜನರ ಜೊತೆಗೆ ಉತ್ತಮ ಒಡನಾಟ ಹೊಂದಿದ್ದರು.

RELATED ARTICLES  ಮಾರ್ಚ್ 22 ರಂದು ಭಾನುವಾರ ಜನತಾ ಕರ್ಫ್ಯೂ : ಮೋದಿಯವರಿಂದ ಆಗ್ರಹ ಪೂರ್ವಕ ಮನವಿ

ಎಲ್ಲರೊಂದಿಗೆ ಪ್ರೀತಿ-ವಿಶ್ವಾಸದಿಂದ ಮಾತನಾಡುತ್ತಿದ್ದವರು, ತುಂಬಿದ ಅವಿಭಕ್ತ ಕುಟುಂಬ, ಚೆಂದದ ಸಂಸಾರವನ್ನು ಅಗಲಿ ಇಂದು ಬಾರದ ಊರಿಗೆ ಹೊರಟಿರುವುದು ಅತೀವ ದುಃಖ ತಂದಿದೆ ಎಂದು ಊರಿನ ಪ್ರಮುಖರು ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 05-02-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ? 

ಇವರು ಕಳೆದ ಅನೇಕ ದಿನಗಳಿಂದ ಕರೋನಾಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮಾಹಿತಿ ಲಭ್ಯವಾಗಿದೆ.

ಸುಧಾಕರ್ ಶೇಟ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಶ್ರೀಕುಮಾರ ಸಂಸ್ಥೆಯ ಮಾಲಿಕರಾದ ವೆಂಕಟ್ರಮಣ ಹೆಗಡೆ ಭಾವಪೂರ್ಣ ನಮನ ಸಲ್ಲಿಸಿದ್ದಾರೆ.