ಹೊನ್ನಾವರ: “ ಅಚ್ಛೆ ದಿನ್ “ ಆಯೆಗಾ ಎಂದು ಹೇಳುತ್ತಾ, ಕಳೆದ ಏಳು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಮೋದಿ ಸರಕಾರ ದೇಶವನ್ನು ಯಶಸ್ವಿಯಾಗಿ ಮುನ್ನೆಡಸಲು ವಿಫಲವಾಗಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್ ತೆಂಗೇರಿ ಹೇಳಿದರು. ಅವರು ಇಂದು ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ.ಶಿವಕುಮಾರ ರಾಜ್ಯಾಧ್ಯಂತ ಎಲ್ಲಾ ಬ್ಲಾಕ್ ಮಟ್ಟದಲ್ಲಿ ಪೆಟ್ರೋಲ್, ಡಿಸೇಲ್, ಬೆಲೆ ಏರಿಕೆಯ ವಿರುದ್ಧ ನೀಡಿದ ಪ್ರತಿಭಟನಾ ಕರೆಯನ್ವಯ, ಹೊನ್ನಾವರದ ಮಿನಿ ವಿಧಾನಸೌಧದ ಎದುರಿಗಿರುವ ಪೆಟ್ರೋಲ್ ಬಂಕ್ ಆವರಣದಲ್ಲಿ ಸೇರಿದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಮೋದಿ ಸುಳ್ಳಿನ ಸರದಾರ. ಜನರಿಗೆ ಸುಳ್ಳು ಬರವಸೆ ನೀಡುತ್ತಾ, ತಮ್ಮ ಭೋಗ ಜೀವನದಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಆಪಾದಿಸಿದರು. ದೇಶದಾಧ್ಯಂತ ಕೋರೊನಾ ಹೆಮ್ಮಾರಿ ತಾಂಡವವಾಡುತ್ತಿದ್ದು, ಇಂತಹ ಕಠಿಣ ಸಂದರ್ಭದಲ್ಲೂ ಜನರ ಜೇಬಿಗೆ ಕತ್ತರಿ ಹಾಕಿ ಪೆಟ್ರೋಲ್, ಡಿಸೇಲ್, ಬೆಲೆಯನ್ನು ಮನಬಂದAತೆ ಏರಿಸುತ್ತಿದ್ದಾರೆ ಎಂದರು. ಇಂದು ಸಾಂಕೇತಿಕವಾಗಿ ಪೆಟ್ರೋಲ್, ಡಿಸೇಲ್, ದರ ಏರಿಕೆಯ ವಿರುದ್ಧ ಪ್ರತಿಭಟಿಸುತ್ತಿದು, ಇದೇ ರೀತಿ ಮುಂದುವರಿದಲ್ಲಿ ಕಾಂಗ್ರೆಸ್ ಪಕ್ಷ ದೇಶದಾಧ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೇಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಎನ್.ಸುಬ್ರಮಣ್ಯ ಮಾತನಾಡಿ ೨೦೧೩ ರಲ್ಲಿ ಕಚ್ಚಾ ತೈಲ್ ಬೆಲೆ ಅಂತರಾಷ್ಟಿçÃಯ ಮಾರುಕಟ್ಟೆಯಲ್ಲಿ ಬ್ಯಾರೆಲಿಗೆ ೧೧೦ ಡಾಲರ್ ಇದ್ದಾಗಲೂ ಅಂದಿನ ಮನಮೋಹನ್ ಸಿಂಗ್ ಸರಕಾರ ಪ್ರತಿ ಲೀಟರ್ ಪೆಟ್ರೋಲಿಗೆ ರೂ.೬೫/- ನೀಡುತ್ತಿತ್ತು. ಇಂದು ಬ್ಯಾರಲಿಗೆ ಅಂತರಾಷ್ಟಿçÃಯ ಮಟ್ಟದಲ್ಲಿ ೬೫ ಡಾಲರ್ ಆದಾಗ ಮೋದಿ ಸರಕಾರ ಪ್ರತಿ ಲೀಟರಿಗೆ ೧೦೦ ರಂತೆ ಮಾರುತ್ತಿದೆ ಎಂದರು. ಅಂದು ಪೆಟ್ರೋಲ್ ಬೆಲೆಯ ಕುರಿತು ಪ್ರತಿಭಟಿಸಿದ್ದ ಬಿ.ಜೆ.ಪಿ.ಯ ಮಹಾನಾಯಕರೆಲ್ಲಾ ಇಂದು ಮಾಯಾವಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಳೆಯನ್ನು ಲೆಕ್ಕಿಸದೇ ನೂರಾರು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಪ್ರತಿಭಟನಾ ಸಭೆಯಲ್ಲಿ ತಾಲೂಕಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮಹೇಶ, ಇಂಟೆಕ್ ಅಧ್ಯಕ್ಷ ಆಗ್ನೇಲ್ ಡಯಾಸ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಕ್ರಿಯಾ ಶೇಖ್, ಜಿಲ್ಲಾ ಕಾಂಗ್ರೇಸ್ ಕಾರ್ಯದರ್ಶಿ ರವಿ ಶೆಟ್ಟಿ, ಕವಲಕ್ಕಿ, ಯುವ ಕಾಂಗ್ರೇಸ್ ಅಧ್ಯಕ್ಷ ಸಂದೇಶ ಶೆಟ್ಟಿ, ಪಕ್ಷದ ಮುಖಂಡರಾದ ಬಾಲು ನಾಯ್ಕ, ಜನಾರ್ಧನ ನಾಯ್ಕ, ದಾಮೋದಯ ನಾಯ್ಕ, ಮಂಜು ಖಾರ್ವಿ, ಶೇಖರ ಚಾರೋಡಿ, ದೀಪಕ ನಾಯ್ಕ, ಮಹೇಶ ನಾಯ್ಕ, ಮಾದೇವ ನಾಯ್ಕ, ಕರ್ಕಿ, ಅಜಂ ಶೇಖ್, ಹನೀಫ ಶೇಖ್, ಜೋಸೆಫ್ ಡಿಸೋಜಾ, ಲಾರಸೆನ್ ರೊಡ್ರಗೀಸ್, ಬಿ. ಕಾರ್ತಿಕ, ನವೀನ ನಾಯ್ಕ, ಗಿರೀಶ ಗೌಡ, ಸೀಮಾ ಡೊಂಗ್ರಿ, ಜಯಂತಿ ಗೌಡ, ಗಜು ನಾಯ್ಕ ಇನ್ನೂ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.