ಕುಮಟಾ : ಜಾನುವಾರಗಳನ್ನು ಲಾರಿಯಲ್ಲಿ ಹಿಂಸಾತ್ಮಕವಾಗಿ ತುಂಬಿಕೊoಡು ಯಾವುದೇ ಪರವಾನಗಿ ಇಲ್ಲದೇ ಪಂಜಾಬನಿoದ ಉಡುಪಿಗೆ ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನು ಕುಮಟಾ ಪೊಲೀಸರು ಹೊಳೆಗದ್ದೆ ಟೋಲ್ ಗೇಟ್ ಬಳಿ ಬಂಧಿಸಿ, ಜಾನುವಾರಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ ರಾಜ್ಯದ ಸಾಹಿಬ್ ಪಾಟೇಗಾರ ನಿವಾಸಿಯಾದ ಅನೀಲಕುಮಾರ ಚಾರಂಜಿತ್ ರತನ ಮತ್ತು ಜಗದೀಪ ಸಿಂಗ್ ಬಂಧಿತ ಆರೋಪಿಗಳಾಗಿದ್ದಾರೆ.

ಕಪ್ಪು-ಬಿಳಿ ಬಣ್ಣದ ಜರ್ಸಿ ತಳಿಯ ಒಟ್ಟು 14 ಗೋಗಳನ್ನು ಲಾರಿಯಲ್ಲಿ ಹಿಂಸಾತ್ಮಕವಾಗಿ ತುಂಬಿಕೊoಡು ಯಾವುದೇ ಪರವಾನಗಿ ಇಲ್ಲದೇ ಪಂಜಾಬನಿoದ ಉಡುಪಿಗೆ ಸಾಗಾಣಿಕೆ ಮಾಡುತ್ತಿದ್ದರು ಎನ್ನಲಾಗಿದೆ.

RELATED ARTICLES  ಮೋದಿಯವರ ಬಗ್ಗೆ ಕೆಟ್ಟದಾಗಿ ಮಾತಾಡಿದ ರೋಷನ್ ಬೇಗ್ ಬಗ್ಗೆ ಸೂರಜ ನಾಯ್ಕ ಸೋನಿ ಹೇಳಿದ್ದೇನು?

ಹೊಳೆಗದ್ದೆ ಟೋಲ್ ಗೇಟ್ ಸಮೀಪ ವಾಹನ ಪರಿಶೀಲಿಸುತ್ತಿರುವಾಗ ಅಕ್ರಮವಾಗಿ ಜಾನುವಾರಗಳನ್ನು ಸಾಗಿಸುತ್ತಿರುವುದು ಕಂಡುಬoದಿದೆ. ತಕ್ಷಣ ಟೋಲ್ ಗೇಟ್ ಸಿಬ್ಬಂದಿ ಕಿರಣ ನಾಯ್ಕ ಹಳದಿಪುರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಾಚರಣೆಗಿಳಿದ ಕುಮಟಾ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಚಾಲಕ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಸುಮಾರು 2.80 ಲಕ್ಷ ರೂ. ಮೌಲ್ಯದ 14 ಜಾನುವಾರಗಳ ಜೊತೆಗೆ ಕಳ್ಳ ಸಾಗಾಣಿಕೆಗೆ ಬಳಸಲಾದ ಲಾರಿಯನ್ನು ವಶಕ್ಕೆ ಪಡೆದ ಪಿಎಸ್‌ಐ ರವಿ ಗುಡ್ಡಿ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ.

RELATED ARTICLES  ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ನಾವೂ ಹಿಂದೂಗಳೇ ಎಂಬುದನ್ನು ತೋರಿಸುತ್ತೇವೆ; ಹೆಚ್'ಡಿಕೆ

ರಕ್ಷಣೆ ಮಾಡಲಾದ ಜಾನುವಾರಗಳನ್ನು ಗೋ ಶಾಲೆಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಾಚರಣೆಯು ಸಿಪಿಐ ಶಿವಪ್ರಕಾಶ ನಾಯ್ಕ ಅವರ ಮಾರ್ಗದರ್ಶನದಲ್ಲಿ ಕುಮಟಾ ಪೊಲೀಸ್ ಠಾಣೆಯ ಸಿಬ್ಬಂದಿ ಪಾಲ್ಗೊಂಡಿದ್ದರು.