ದಾಂಡೇಲಿ : ಬಾಂಧವ್ಯಕ್ಕೆ ಬೆಲೆಯೇ ಇಲ್ಲ ಎಂಬ ಕಾಲ ಬಂದಿದೆ ಅಂತಾರೆ ಪ್ರಜ್ಞರು, ಕೆಲವೊಂದು ಘಟನೆ ಆ ಹೇಳಿಕೆಗೆ ಪುಷ್ಟಿ ನೀಡೋವಂತಿದೆ. ದಾಂಡೇಲಿಯಲ್ಲಿ ಗಂಡ ಹೆಂಡತಿ ನಡುವಿನ ಮನಸ್ಥಾಪ ಕೊಲೆಗೆ ಸುಪಾರಿ ನೀಡುವ ಹಂತದ ವರೆಗೆ ತಲುಪಿರುವುದು ಇದೀಗ ವರದಿಯಾಗುತ್ತಿದೆ.
ಮಕ್ಕಳಾಗದ ಕಾರಣ ಮತ್ತು ಮೊಬೈಲ್ ನಲ್ಲಿ ಕಾಲಹರಣ ಮಾಡುತ್ತಿದ್ದ ಪತ್ನಿಗೆ ಬುದ್ದಿವಾದ ಹೇಳಿದ್ದಕ್ಕೆ ಪತಿಯ ಕೊಲೆಗೆ ಪತ್ನಿಯೇ ಸುಪಾರಿ ನೀಡಿದಳು ಎನ್ನಲಾದ ಘಟನೆ ದಾಂಡೇಲಿಯ ಗಾಂವಠಾಣಾದಲ್ಲಿ ನಡೆದಿದೆ ಎನ್ನಲಾಗಿದೆ.
ಸುಪಾರಿ ಪಡೆದು ಅಂಕುಷ ರಾಮಾ ಸುತಾರ ಎಂಬುವವನ್ನು ಕೊಲೆಗೆ ಯತ್ನಿಸಿದ ಕಾರಣಕ್ಕೆ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ ಆ ಸಂದರ್ಭದಲ್ಲಿ ಘಟನೆ ಬಗ್ಗೆ ತಿಳಿದಿದೆ ಎನ್ನಲಾಗಿದೆ. ಪತ್ನಿ ಸರಸ್ವತಿ ಸುತಾರ ಮತ್ತು ಬೆಳಗಾವಿಯ ನಂದಗಡದ ಗಣೇಶ ಶಾಂತರಾಂ ಪಾಟೀಲ್ ಬಂಧಿತರು.
ತನ್ನ ಪತಿಯ ಕೊಲೆಗೆ ಪತ್ನಿ ಸರಸ್ವತಿ ಸ್ನೇಹಿತೆಯ ಬಳಿ 30 ಸಾವಿರ ರೂಪಾಯಿಗೆ ಸುಪಾರಿ ನೀಡಿದ್ದಾಳೆ. ಜೂನ್ 11 ರಾತ್ರಿ ಮನೆಯಲ್ಲಿದ್ದಾಗ ಪತ್ನಿ ಮತ್ತು ಆರೋಪಿ ಗಣೇಶ ಇಬ್ಬರು ಅಪ್ರಾಪ್ತರೊಂದಿಗೆ ಸೇರಿ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ. ಆಗ ಅಂಕುಷ ಕೂಗಿಕೊಂಡಾಗ ಅಕ್ಕಪಕ್ಕದಲ್ಲಿದ್ದ ಸಹೋದರರು ಓಡಿ ಬಂದಿದ್ದಾರೆ. ಆಗ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಆರೋಪಿಯನ್ನ ದಾಂಡೇಲಿಯ ಭರ್ಚಿ ಬಳಿ ಬಂಧಿಸಲಾಗಿದ್ದು, ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಂತರ ಪೂರ್ಣ ಮಾಹಿತಿ ಹೊರ ಬರಲಿದೆ.