ಭಟ್ಕಳ: ಗೋವುಗಳ ಕಳ್ಳ ಸಾಗಾಣಿಕೆ ಹಾಗೂ ಕೋಣಗಳ ಸಾಗಾಣಿಕೆ ಸುದ್ದಿ ಕಳೆದ ಎರಡು ದಿನಗಳಿಂದ ವರದಿಯಾಗುತ್ತಿದೆ. ಇಂದು ಗೋಮಾಂಸ ಸಾಗರದ ಸುದ್ದಿ ಸದ್ದು ಮಾಡುತ್ತಿದೆ.
ಅಕ್ರಮವಾಗಿ ಹಣ್ಣಿನ ವಾಹನವೊಂದರಲ್ಲಿ 500 ಕೆಜಿ ದನದ ಮಾಂಸ ಸಾಗಾಟ ಮಾಡುತ್ತಿರುವ ವೇಳೆ ಶಿರಾಲಿ ಪೊಲೀಸ ಚೆಕ್ ಪೋಸ್ಟ ಬಳಿ ವಾಹನ ತಡೆದು ಮೂವರು ಆರೋಪಿಗಳನ್ನು ಬಂದಿಸಿದ ಘಟನೆ ಮಂಗಳವಾರ ನಡೆದ ಬಗ್ಗೆ ವರದಿಯಾಗಿದೆ.
ಶಿರಾಲಿ ಪೊಲೀಸ ಚೆಕ್ ಪೋಸ್ಟನಲ್ಲಿ
ವಾಹನ ಹಿಂಬದಿಯಲ್ಲಿ ಸುಮಾರು 1 ಲಕ್ಷ ಮೌಲ್ಯದ ಸುಮಾರು 500 ಕೆ.ಜಿ. ಆಗುವಷ್ಟು ದನದ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ವಾಹನದಲ್ಲಿ ಸಾಗಿಸಲಾಗುತ್ತಿತ್ತು ಎಂದು ಪ್ರಾಥಮಿಕ ವರದಿಗಳು ತಿಳಿಸಿದೆ.
ಯಾವುದೇ ಪರವಾನಿಗೆ ಪಡೆಯದೇ ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ವಾಹನದಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದ ವೇಳೆ ಶಿರಾಲಿ ಪೊಲೀಸ ಚೆಕ್ ಪೋಸ್ಟನಲ್ಲಿ ವಾಹನ ಸಮೇತ ಆರೋಪಿತರು ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳಾದ ಮೌಲಾಲಿ ಭಾಷಾಸಾಬ್,ಜಿಲಾನಿ ಗೌಸ್ ಹಾಗೂ ಮುಜಾಫರ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದನ ಸಾಗಾಟ ಮಾಡುತ್ತಿದ್ದ ವಾಹನ ಹಾಗೂ ಹಣ್ಣು ತುಂಬುವ ಖಾಲಿ ಟ್ರೇ ಹಾಗೂ ದನದ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಗ್ರಾಮೀಣಾ ಠಾಣಾ ಎಎಸೈ ಕೃಷ್ಣಾನಂದ ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.