ಕುಮಟಾ-ಹೊನ್ನಾವರ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರು, ಅಭಿವೃದ್ಧಿ ಹರಿಕಾರರು ಆದ ದಿ. ಮೋಹನ್ ಕೆ.ಶೆಟ್ಟಿ ಯವರ ಜನ್ಮದಿನದ ಪ್ರಯುಕ್ತ ದಿ.ಮೋಹನ್ ಕೆ.ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಕ್ಷೇತ್ರದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಹಾಗೂ ಯುವಮುಖಂಡರಾದ ಶ್ರೀ ರವಿಕುಮಾರ್ ಎಂ.ಶೆಟ್ಟಿಯವರು ಕುಮಟಾ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ 50000 ರೂಪಾಯಿಗಳನ್ನು ದೇಣಿಗೆ ನೀಡಿದರು ಹಾಗೂ ಆಸ್ಪತ್ರೆಯ ಒಳರೋಗಿಗಳಿಗೆ ಹಾಗೂ ಕೊರೋನ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಸೋಂಕಿತರಿಗೆ ಹಣ್ಣು-ಬ್ರೆಡ್-ಬಿಸ್ಕೆಟ್ ಒಳಗೊಂಡಿರುವ ಆಹಾರದ ಕಿಟ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಮಾತನಾಡಿ,” ಇಂದು ನಮ್ಮ ಪತಿಯವರಾದ ದಿವಂಗತ ಮೋಹನ್ ಕೆ.ಶೆಟ್ಟಿಯವರ ಜನ್ಮದಿನದ ಪ್ರಯುಕ್ತ ಕುಮಟಾ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ 50000 ರೂಪಾಯಿಗಳನ್ನು ನೀಡುತ್ತಿದ್ದೇವೆ. ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ನಮ್ಮ ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯ ನವರ ಸರ್ಕಾರದಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಹತ್ತಿರದಲ್ಲಿಯೇ ಚಿಕಿತ್ಸೆ ಪಡೆಯಬೇಕೆಂಬ ಉದ್ದೇಶದಿಂದ ಪ್ರತಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರ ತೆರೆಯಲಾಗಿತ್ತು.
ಆದರೆ ಇಂದು ಕೆಲವು ಉಪಕರಣಗಳ ಕೊರತೆಯಿಂದ ಡಯಾಲಿಸಿಸ್ ಚಿಕಿತ್ಸೆಗೆ ವ್ಯತ್ಯಯವಾಗುತ್ತಿದ್ದು, ರೋಗಿಗಳಿಗೆ ಇನ್ನು ಮುಂದೆ ಸಮಸ್ಯೆಯಾಗಬಾರದೆಂಬ ಉದ್ದೇಶದಿಂದ ದೇಣಿಗೆಯನ್ನು ನೀಡುತ್ತಿದ್ದೇವೆ. ಅಲ್ಲದೆ ಪ್ರತಿ ವರ್ಷದಂತೆ ಈ ವರ್ಷವೂ ಆಸ್ಪತ್ರೆಯ ಒಳರೋಗಿಗಳಿಗೆ ಹಾಗೂ ಈ ವರ್ಷ ಕೊರೋನ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿರುವ ಒಳರೋಗಿಗಳಿಗೆ ಹಣ್ಣು ಹಂಪಲು ಬ್ರೆಡ್ ಗಳನ್ನು ವಿತರಿಸುತ್ತಿದ್ದೇವೆ. ನಮ್ಮ ವೈದ್ಯಾಧಿಕಾರಿಗಳೆಲ್ಲೂ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ, ಭಗವಂತನು ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ನೀಡಲಿ” ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ರವಿಕುಮಾರ್ ಎಂ.ಶೆಟ್ಟಿ, ವಿ.ಎಲ್.ನಾಯ್ಕ, ಸುರೇಖಾ ವಾರೇಕರ್, ಮುಜಾಫರ್ ಸಾಬ್, ಶಶಿಕಾಂತ ನಾಯ್ಕ, ದೀಪಾ ನಾಯ್ಕ, ಕೃಷ್ಣಾನಂದ ವೆರ್ಣೇಕರ್, ಜಗದೀಶ್ ಹರಿಕಂತ್ರ, ಆನಂದು ನಾಯಕ, ವೀಣಾ ನಾಯಕ, ಚಂದ್ರಹಾಸ ನಾಯಕ, ಬೀರ ಗೌಡ, ವಿನು ಜಾರ್ಜ, ಮೈಕೆಲ್, ಬೀರಣ್ಣ ನಾಯಕ, ನಿತ್ಯಾನಂದ ನಾಯ್ಕ, ಮನೋಜ ನಾಯಕ, ದತ್ತು ಶೆಟ್ಟಿ, ಸಂತೋಷ್ ನಾಯ್ಕ, ವಿಜಯ ವೆರ್ಣೇಕರ್ ವೈದ್ಯಾಧಿಕಾರಿಗಳಾದ ಆಜ್ಞಾ ನಾಯಕ ಹಾಗೂ ಶ್ರೀನಿವಾಸ ನಾಯಕ ಹಾಜರಿದ್ದರು.