ಕುಮಟಾ : ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಕುಮಟಾ.-ರಸಾಯನಶಾಸ್ತ್ರ ವಿಭಾಗ (ಸ್ನಾತಕ -ಸ್ನಾತಕೋತ್ತರ) ಇದರ ಅಡಿಯಲ್ಲಿ “ರೋಲ್ ಆಫ್ ರೀಸರ್ಚ ಆಕ್ಟಿವಿಟಿಸ್ ಇನ್ ನ್ಯಾಕ್ ಎಸ್ಸೆಸ್ಮೆಂಟ್” (ನ್ಯಾಕ್ ಮೌಲ್ಯಮಾಪನ ವೇಳೆ ಸಂಶೋಧನೆಯ ಪಾತ್ರ) ಎಂಬ ವಿಷಯದ ಮೇಲೆ ಅನ್ ಲೈನ್ ಕಾರ್ಯಗಾರ ನಡೆಯಿತು.

ಪ್ರಾಚಾರ್ಯ ಡಾ. ಪಿ. ಕೆ. ಭಟ್ ವೆಬಿನಾರ್‌ನ ಮಹತ್ವವನ್ನು ತಿಳಿಸಿ, ಎಲ್ಲರನ್ನು ಹುರಿದುಂಬಿಸಿ, ಇಂತಹ ಕರ‍್ಯಕ್ರಮಗಳು ನಡೆಯುತ್ತಿರಬೇಕೆಂದು ಆಶಿಸಿದರು. ಕನ್ವೇನರ್ ಡಾ. ರೇವತಿ ನಾಯ್ಕ ಸಂಪನ್ಮೂಲ ವ್ಯೆಕ್ತಿಯಾದ ಡಾ. ಬಿ. ಇ. ಕುಮಾರಸ್ವ್ವಾಮಿ, ಚೆರಮನ್, ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ ಇವರನ್ನು ಪರಿಚಯಿಸಿದರು.

RELATED ARTICLES  ಕುಮಟಾಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಈಗ ಪೋಲೀಸರ ಅತಿಥಿ!

ಡಾ. ಬಿ. ಇ. ಕುಮಾರಸ್ವ್ವಾಮಿಯವರು “ರೋಲ್ ಆಫ್ ರೀಸರ್ಚ ಆಕ್ಟಿವಿಟಿಸ್ ಇನ್ ನ್ಯಾಕ್ ಎಸ್ಸೆಸ್ಮೆಂಟ್” ವಿಷಯವನ್ನು ಎಲ್ಲರಿಗೂ ಮನಮುಟ್ಟುವಂತೆ ಮಂಡಿಸಿದರು. ವಿಷಯದ ಮಂಡನೆಯ ನಂತರ ವೆಬಿನಾರನಲ್ಲಿ ಭಾಗವಹಿಸಿದವರು ಪ್ರಶ್ನೆಗಳನ್ನು ಕೇಳಿ, ಉತ್ತರ ಪಡೆದುಕೊಂಡರು.

RELATED ARTICLES  ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಈ ವೆಬಿನಾರನಲ್ಲಿ ೧೨೦ ಅಭ್ಯರ್ಥಿಗಳು ಬೇರೆ ಬೇರೆ ರಾಜ್ಯಗಳಿಂದ ಭಾಗವಹಿಸಿ, ವೆಬಿನಾರ್‌ನ ವರ್ಚಸ್ಸು ಹೆಚ್ಚಿಸಿದರು. ಸ್ವಾಗತ ಗೀತೆಯನ್ನು ಕು. ಗಾಯತ್ರಿ ಹಾಡಿದರು. ಕಾರ್ಯಾಗಾರದ ಕೋ-ಆರ್ಡಿನೇಟರ್ ಹಾಗೂ ವಿಭಾಗದ ಮುಖ್ಯಸ್ಥರಾದ ಡಾ. ಎನ್. ಕೆ. ನಾಯಕರವರು ಅತಿಥಿ-ಅಭ್ಯಾಗತರನ್ನು ಸ್ವಾಗತಿಸಿದರು. ಅನುರಾಗ ನಾಯ್ಕರವರು ವಂದಿಸಿದರು. ಸ್ನೇಹಾ ಹೆಗಡೆ ಕಾರ‍್ಯಕ್ರಮ ನಿರೂಪಿಸಿದರು.