ಕಾರವಾರ : ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ಪ್ರಕಾರ ಇಂದು 162 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಮೂರು ಜನ ಕೊರೋನಾಗೆ ಬಲಿಯಾಗಿದ್ದಾರೆ.

ಕಾರವಾರದಲ್ಲಿ 16, ಅಂಕೋಲಾದಲ್ಲಿ 8, ಕುಮಟಾದಲ್ಲಿ 28, ಹೊನ್ನಾವರ 24, ಭಟ್ಕಳದಲ್ಲಿ 24, ಶಿರಸಿಯಲ್ಲಿ 24, ಸಿದ್ದಾಪುರದಲ್ಲಿ 8, ಯಲ್ಲಾಪುರದಲ್ಲಿ 6, ಮುಂಡಗೋಡ 8, ಹಳಿಯಾಳದಲ್ಲಿ 15, ಮತ್ತು ಜೋಯಿಡಾದಲ್ಲಿ 1 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

RELATED ARTICLES  ಪ್ರಾಥಮಿಕ ಶಾಲೆಗಳಲ್ಲಿ ಅಳವಡಿಸಿಕೊಂಡಿರುವ ‘ನಲಿ–ಕಲಿ’ ಪದ್ಧತಿ ಅವೈಜ್ಞಾನಿಕ : ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಬೇಂದ್ರೆ ಕೃಷ್ಣಪ್ಪ ಕಳವಳ.

ಕಾರವಾರ 1, ಶಿರಸಿ 1, ಮುಂಡಗೋಡ 1 ಸಾವು ಸಂಭವಿಸಿದೆ. ಒಟ್ಟೂ 3 ಸಾವಿನೊಂದಿಗೆ ಜಿಲ್ಲೆಯ ಒಟ್ಟು ಸಾವಿನ ಸಂಖ್ಯೆ 681 ಆಗಿದೆ.

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 1817 ಆಗಿದ್ದು, ಅವರಲ್ಲಿ 197 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 1620 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ಕಾರವಾರ 30, ಅಂಕೋಲಾ‌ 10, ಕುಮಟಾ 69, ಹೊನ್ನಾವರ 103, ಭಟ್ಕಳ 16, ಶಿರಸಿ 66, ಸಿದ್ದಾಪುರ 24, ಯಲ್ಲಾಪುರ 22, ಮುಂಡಗೋಡ 12, ಹಳಿಯಾಳ 28, ಜೋಯ್ಡಾ 17 ಜನರು ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 397ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  "ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ"ಗೆ ರವೀಂದ್ರ ಭಟ್ಟ ಸೂರಿ ಆಯ್ಕೆ.

ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ ಇದುವೇ ಜನತೆಗೆ ನಮ್ಮ ಕಳಕಳಿಯ ಮನವಿ.