ಭಟ್ಕಳ: ಏಷ್ಯಾದಲ್ಲಿಯೆ ೨ನೇ ಎತ್ತರದ ಶಿವನ ಪ್ರತಿಮೆ ಹೊಂದಿದೆ ಎಂಬ ಪ್ರಖ್ಯಾತಿ ಪಡೆದಿರುವ ಮುರುಡೇಶ್ವರ, ಧಾರ್ಮಿಕರನ್ನಷ್ಟೇ ತನ್ನತ್ತ ಸೆಳೆಯದೆ ವಿಹಾರಿಗಳನ್ನೂ ಆಕರ್ಷಿಸುತ್ತಿದೆ. ಇಲ್ಲಿನ ಸಮುದ್ರದಲ್ಲಿ ಜಲ ಕ್ರೀಡೆ ಆಡುವುದೆ ಒಂದು ಅನನ್ಯ ಅನುಭವ. ರಾಷ್ಟ್ರೀಯ ಹೆದ್ದಾರಿಯಿಂದ ಊರನ್ನು ಪ್ರವೇಶಿಸುವಾಗ ಮಹಾದ್ವಾರವು ಕಲಾತ್ಮಕವಾಗಿದ್ದು ದೇವಾಲಯದ ಬಳಿಸಾರಿದಂತೆ ಎರಡು ಆನೆಗಳು ಪ್ರವಾಸಿಗರ ಮನ ಸೆಳೆಯುತ್ತವೆ.

ಇದೀಗ ಅಮೇರಿಕಾದ ಇ-ಗ್ಲೋಬಲ್ ಫಿಲಿಪ್ಸ್ ಸಂಸ್ಥೆ ಆಯೋಜಿಸಿದ್ದ ಪೀಪಲ್ ಚೋಯಿಸ್ ಅವಾರ್ಡ್ 2021 ಪ್ರಶಸ್ತಿಯನ್ನು ವಿದ್ಯುದಲಂಕಾರಗೊಂಡ ಮುರುಡೇಶ್ವರದ ದೇವಾಲಯ ಪಡೆದುಕೊಂಡಿದೆ.

RELATED ARTICLES  ಉತ್ತರಕನ್ನಡದಲ್ಲಿ ಚಿಗುರಿದ ಎಮ್ಸ್ ಆಸ್ಪತ್ರೆ ಕನಸು

ಈ ಸ್ಪರ್ಧೆಯಲ್ಲಿ ಜಗತ್ತಿನ ಒಟ್ಟು 25 ಗ್ಲೋಬಲ್ ಪ್ರಾಜೆಕ್ಟ್ ಸಂಸ್ಥೆ ಭಾಗವಹಿಸಿದ್ದು. ಆನ್ಲೈನ್ ಮೂಲಕ 6,871 ಮಂದಿ ಮತ ಚಲಾಯಿಸಿದ್ದು. ಆದರೆ ಜಗತ್ತಿನ 24 ಗ್ಲೋಬಲ್ ಪ್ರಾಜೆಕ್ಟನ ಹಿಂದಿಕ್ಕಿ ತಾಲೂಕಿನ ವಿಶ್ವ ಪ್ರಸಿದ್ಧ ಮುರುಡೇಶ್ವರ ದೇವಾಲಯದ ವಿದ್ಯುದಲಂಕಾರಕ್ಕೆ 2500 ಮತ ಪಡೆಯುವದರ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡು. ಈ ಮೂಲಕ ಅಮೇರಿಕಾದ ಈಗ್ಲೋಬಲ್ ಫಿಲಿಪ್ಸ್ ಸಂಸ್ಥೆ ಆಯೋಜಿಸಿದ್ದ ಪೀಪಲ್ ಚೋಯಿಸ್ ಅವಾರ್ಡ್ 2021 ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

RELATED ARTICLES  ಹವ್ಯಕ ಮಹಾಸಭೆಯಿಂದ ನಾಳೆ ಸಾರ್ವಜನಿಕ ಉಚಿತ ವೈದ್ಯಕೀಯ ತಪಾಸಣಾ ಶಿಬಿರ: ಸಾರ್ವಜನಿಕರಿಗೆ ಮುಕ್ತ ಅವಕಾಶ

ಈ ವಿದ್ಯುದಲಂಕಾರ ಮಾಡಿದ ಬೆಂಗಳೂರಿನ ಸಂಚನ ಗುರು ಡಿಸ್ತ್ರಿಬ್ಯೂಟರ್ಸ್ ಗೆ ಈ ವರ್ಷದ ಪ್ರಶಸ್ತಿ ದೊರಕಿದೆ. ಇದು ಉತ್ತರಕನ್ನಡವೇ ಹೆಮ್ಮೆ ಪಡುವ ಸಂಗತಿ ಎಂದೇ ಬಣ್ಣಿಸಲಾಗುತ್ತಿದೆ.

ವೀಡಿಯೋ ನೋಡಿ.

https://youtu.be/Dtf3dVkrDU0