ಕುಮಟಾ.ಇತ್ತೀಚೆಗೆ ಅನಾರೋಗ್ಯದಿಂದ ಮೃತರಾದ ವಾಲಗಳ್ಳಿ ಪಂಚಾಯತ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರು ಹಾಗೂ ಕುಮಟಾ ಯುವ ಒಕ್ಕೂಟದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದ ಶ್ರೀ ಮಂಜುನಾಥ ಗೌಡ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ನಾಳೆ ದಿನಾಂಕ 19/06/2021 ರಂದು ಶನಿವಾರ ಸಂಜೆ ಐದುಗಂಟೆಯಿಂದ ಅವರ ಗೆಳೆಯ ಬಳಗದವರು ಹಮ್ಮಿಕೊಂಡಿದ್ದು ಕೋವಿಡ್ ನಿಯಮಾವಳಿಯ ಕಾರಣಕ್ಕೆ ಆನ್ ಲೈನ್ ಮೂಲಕವೇ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಗೂಗಲ್ ಮೀಟ್ ಮೂಲಕ ನೆರವೇರುವ ಈ ಕಾರ್ಯದಲ್ಲಿ ಅವರ ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೃತರ ಆತ್ಮಕ್ಕೆ ಶ್ರದ್ಧಾಂಜಲಿಯನ್ನು ಸಲ್ಲಿಸಬೇಕೆಂದು ಅವರ ಆಪ್ತರಲ್ಲಿ ಒಬ್ಬರಾದ ಗಣೇಶ ಅಂಬಿಗ ಮಿರ್ಜಾನ ವಿನಂತಿಸಿಕೊಂಡಿದ್ದಾರೆ.ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸುವವರು ಈ ಲಿಂಕ್ ಬಳಸುವುದು. – https://meet.google.com/htw-gitg-xrf