ಬೆಂಗಳೂರು : ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಮತ್ತು ಇಂಧನ ಸಚಿವ ಡಿಕೆ ಶಿವಕುಮಾರ್ ಅವರದ್ದು ಎಣ್ಣೆ ಸೀಗೇಕಾಯಿ ಸಂಬಂಧ. ಶಿವಕುಮಾರ್ ವಿರುದ್ಧ ಸದಾ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಹೆಚ್.ಡಿ.ಡಿ ಇತ್ತೀಚಿನ ದಿನಗಳಲ್ಲಿ ಹತ್ತಿರವಾಗುತ್ತಿರುವುದು ಕುತೂಹಲ ಮೂಡಿಸಿದೆ. ಸಮುದಾಯದ ಹೆಸರಿನಲ್ಲಿ ಇಬ್ಬರು ಹತ್ತಿರವಾಗುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಡಿಕೆಶಿ ಬಗ್ಗೆ ಮೆತ್ತಗಾಗಿರುವ ಎಚ್.ಡಿ.ಡಿ ಅವರಿಗೂ ಮುಖ್ಯಮಂತ್ರಿಯಾಗುವ ಶಕ್ತಿ ಇದೆ, ಸುಲಭವಾಗಿ ಪಕ್ಷ ಬಿಡುವುದಿಲ್ಲ ಅವರು ಎಂದು ಮಾಜಿ ಪ್ರಧಾನಿಗಳು ಹೇಳಿಕೆ ನೀಡಿರುವುದು ವಿವಿಧ ರೀತಿ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಒಕ್ಕಲಿಗರ ಸಂಘದಲ್ಲಿ ಬಿರುಕು ಉಂಟಾದ ಸಂದರ್ಭದಲ್ಲಿ ದೆಹಲಿಯಲ್ಲಿ ದೇವೇಗೌಡರನ್ನು ಭೇಟಿಯಾಗಿದ್ದ ಶಿವಕುಮಾರ್ ನಂತ್ರ ಕೆಂಪೇಗೌಡ ಜಯಂತಿ ವೇಳಿ ಮಾಜಿ ಪ್ರಧಾನಿಗಳ ಕಾಲಿಗೆ ಎರಗಿ ನಮಸ್ಕರಿಸಿದ್ದರು. ಇದೀಗ ಐಟಿ ದಾಳಿಯ ನಂತ್ರ ಕೃಷಿಕ್ ಸರ್ವೋದಯ ಫೌಂಡೇಷನ್ ಕಾರ್ಯಕ್ರಮದ ವೇದಿಕೆಯಲ್ಲಿ ಮುನಿಸು ಮರೆತು ಆತ್ಮೀಯರಾಗಿವುದು ಏನನ್ನೂ ಸೂಚಿಸುತ್ತಿದೆ ಅನ್ನುವುದನ್ನು ಅರಿತುಕೊಳ್ಳಲು ರಾಜಕೀಯ ವಿಶ್ಲೇಷಕರಿಗೆ ಸಾಧ್ಯವಾಗಿಲ್ಲ.
ದೇವೇಗೌಡರು ಡಿಕೆ ಶಿವಕುಮಾರ್ ಅವರನ್ನು ಹೊಗಳುತ್ತಿದ್ದಾರೆ. ಡಿಕೆ ಶಿವಕುಮಾರ್ ದೇವೇಗೌಡರನ್ನು ಹೊಗಳುತ್ತಿದ್ದಾರೆ. ಇದರ ಹಿಂದಿನ ಮರ್ಮವೇನು ಅನ್ನುವುದೇ ಯಕ್ಷ ಪ್ರಶ್ನೆ.