ಕಾರವಾರ : ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ಪ್ರಕಾರ ಇಂದು 132 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಇಬ್ಬರು ಕೊರೋನಾಗೆ ಬಲಿಯಾಗಿದ್ದಾರೆ.

ಕಾರವಾರದಲ್ಲಿ 27, ಅಂಕೋಲಾದಲ್ಲಿ 8, ಕುಮಟಾದಲ್ಲಿ 30, ಹೊನ್ನಾವರ 24, ಭಟ್ಕಳದಲ್ಲಿ 11, ಶಿರಸಿಯಲ್ಲಿ 9, ಸಿದ್ದಾಪುರದಲ್ಲಿ 1, ಯಲ್ಲಾಪುರದಲ್ಲಿ 11, ಮುಂಡಗೋಡ 1, ಹಳಿಯಾಳದಲ್ಲಿ 8, ಮತ್ತು ಜೋಯಿಡಾದಲ್ಲಿ 2 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

RELATED ARTICLES  ವಿದ್ಯಾಪ್ರಸನ್ನ ಶ್ರೀಗಳ ಭೇಟಿ- ಕುಕ್ಕೆ ದೇವರ ದರ್ಶನ ಪಡೆದ ಅಮಿತ್ ಶಾ

ಕಾರವಾರ 1, ಹೊನ್ನಾವರ 1ಸಾವು ಸಂಭವಿಸಿದೆ. ಒಟ್ಟೂ 2 ಸಾವಿನೊಂದಿಗೆ ಜಿಲ್ಲೆಯ ಒಟ್ಟು ಸಾವಿನ ಸಂಖ್ಯೆ 683 ಆಗಿದೆ.

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 1609 ಆಗಿದ್ದು, ಅವರಲ್ಲಿ 160 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 1449 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ಕಾರವಾರ 22, ಅಂಕೋಲಾ‌ 13, ಕುಮಟಾ 42, ಹೊನ್ನಾವರ 77, ಭಟ್ಕಳ 29, ಶಿರಸಿ 39, ಸಿದ್ದಾಪುರ 20, ಯಲ್ಲಾಪುರ 22, ಮುಂಡಗೋಡ 23, ಹಳಿಯಾಳ 51, ಜೋಯ್ಡಾ 0 ಜನರು ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 338 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  ನಾಳೆ ಉತ್ತರಕನ್ನಡದಲ್ಲಿ ಅತೀ ಹೆಚ್ಚು ಲಸಿಕೆ ಲಭ್ಯ..!

ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ ಇದುವೇ ಜನತೆಗೆ ನಮ್ಮ ಕಳಕಳಿಯ ಮನವಿ.