ಭಟ್ಕಳ: ರೈತರ ಪಾಡು ಒಂದು ವಿಧವಾದರೆ ದಿನನಿತ್ಯ ಕೂಲಿ ಕೆಲಸ ಮಾಡಿ ರೈತಾಪಿ ಕೆಲಸ ಮಾಡಿ ಜೀವನ ಸಾಗಿಸುವವರ ಸ್ಥಿತಿ ಇನ್ನೊಂದು ಪಾಡು. ಕೃಷಿ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡ ವ್ಯಕ್ತಿಯೋರ್ವ ಅವಘಡದಿಂದ ಸಾವನ್ನಪ್ಪಿರುವ ಘಟನೆ.

ಭಟ್ಕಳ ತಾಲೂಕಿನ ಜಾಲಿಯ ಬದ್ರಿಯಾ ಕಾಲೋನಿಯಲ್ಲಿ ತೆಂಗಿನಮರವೇರಿ ಕಾಯಿ ಕೊಯ್ಯುತ್ತಿದ್ದ ಕೃಷಿ ಕೂಲಿ ಕಾರ್ಮಿಕನೊಬ್ಬನಿಗೆ ತೆಂಗಿನ ಗರಿಯು ವಿದ್ಯುತ್ ಲೈನ್ ತಗುಲಿದ ಪರಿಣಾಮ ಮರದಿಂದ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

RELATED ARTICLES  ದಿವ್ಯಜೀವನ ಪುಸ್ತಕ ಲೋಕಾರ್ಪಣೆ : ವಿದ್ವಾನ್ ಜಗದೀಶಶರ್ಮಾ ಸoಪ ಅವರ ಕೃತಿ

ಮೃತ ಪಟ್ಟ ವ್ಯಕ್ತಿ ಜಾಲಿ ಹಾರುಮಕ್ಕಿಯ ರಾಮ ಸೋಮಯ್ಯ ಗೊಂಡ ಎನ್ನುವವನಾಗಿದ್ದು ಈತನಿಗೆ 30 ವರ್ಷ ವಯಸ್ಸಾಗಿತ್ತು, ಈತನು ಶುಕ್ರವಾರ ಮಧ್ಯಾಹ್ನ ಬದ್ರಿಯಾ ಕಾಲೋನಿಯ ಅಬ್ದುಲ್ ರಶೀದ್ ಅವರ ತೋಟದಲ್ಲಿದ್ದ ತೆಂಗಿನಮರದ ಕಾಯಿ ಕೊಯ್ಯುತ್ತಿದ್ದ ಸಂದರ್ಭದಲ್ಲಿ ಸನಿಹದಲ್ಲೇ ಇದ್ದ ವಿದ್ಯುತ್ ಲೈನ್‌ಗೆ ಆಕಸ್ಮಿಕವಾಗಿ ತೆಂಗಿನ ಗರಿಗೆ ತಾಗಿ ಈತನಿಗೆ ಶಾಕ್ ಹೊಡೆದಿದೆ. ಶಾಖ್‌ನಿಂದಾಗಿ ಅಸ್ವಸ್ಥಗೊಂಡ ಈತ ಮರದಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

RELATED ARTICLES  ಟಿಪ್ಪು ಜಯಂತಿ ಬದಲು ಸಿದ್ದರಾಮಯ್ಯ ಜಯಂತಿ ಆಚರಿಸುವುದು ಒಳ್ಳೆಯದು : ನಳೀನ್ ಕುಮಾರ್ ಕಟೀಲ್

ಮೃತ ವ್ಯಕ್ತಿ ಅವಿವಾಹಿತ ನಾಗಿದ್ದು ಅತ್ಯಂತ ಕಡು ಬಡವನಾಗಿದ್ದು ಕೃಷಿ ಕಾಯಕವನ್ನು ನಂಬಿ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ಕುರಿತು ಈತನ ಸಹೋದರ ಮಾದೇವ ಸೋಮಯ್ಯ ಗೊಂಡ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು,ಪೊಲೀಸರು ತನಿಖೆ ಕೈಗೊಂಡಿದ್ದಾರೆ.